ಸ್ಯಾಂಡಲ್ವುಡ್ನ ಖ್ಯಾತ ನಟ ಧ್ರುವ ಸರ್ಜಾ ಅವರ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ ಆಗಿದೆ. ಅವರ ಪತ್ನಿ ಪ್ರೇರಣಾ ಈಗ ತುಂಬು ಗರ್ಭಿಣಿ. ಧ್ರುವ ಸರ್ಜಾ ಮತ್ತು ಪ್ರೇರಣಾ ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತಾವು ಮತ್ತೆ ತಂದೆ ಆಗುತ್ತಿರುವ ವಿಷಯವನ್ನು ಧ್ರುವ ಸರ್ಜಾ ಅವರು ಇತ್ತೀಚೆಗಷ್ಟೇ ರಿವೀಲ್ ಮಾಡಿದ್ದರು. ಈಗ ಬಹಳ ಸಂಭ್ರಮದಿಂದ ಪ್ರೇರಣಾ ಅವರ ಸೀಮಂತ ಶಾಸ್ತ್ರ ಮಾಡಲಾಗಿದೆ. ಕುಟುಂಬದವರು ಮತ್ತು ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ಧ್ರುವ ಸರ್ಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಶುಭ ಕೋರಿದ್ದಾರೆ.
ಇತ್ತೀಚೆಗೆ ಎಲ್ಲ ಕಡೆಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಖುಷಿಯಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಧ್ರುವ ಸರ್ಜಾ ಅವರ ಕುಟುಂಬದರು ಪ್ರೇರಣಾಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಹಾಗಾಗಿ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ತಮ್ಮ ಪಾಲಿಗೆ ತುಂಬ ಸ್ಪೆಷಲ್ ಆಗಿತ್ತು ಎಂದು ಧ್ರುವ ಸರ್ಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಸಾವಿರಾರು ಅಭಿಮಾನಿಗಳು ಲೈಕ್ ಮಾಡಿದ್ದಾರೆ. ಕಮೆಂಟ್ಗಳ ಮೂಲಕ ಶುಭಾಶಯ ತಿಳಿಸಲಾಗಿದೆ.
ಧ್ರುವ ಸರ್ಜಾ ಸಹೋದರ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದು ಆ ಕುಟುಂಬಕ್ಕೆ ಆದಂತಹ ದೊಡ್ಡ ನಷ್ಟ. ಪ್ರತಿ ಕ್ಷಣವೂ ಚಿರು ನೆನಪು ಕಾಡುತ್ತದೆ. ವಿಶೇಷ ಸಂದರ್ಭಗಳಲ್ಲಿ ಚಿರುಗೆ ಕುಟುಂಬದವರು ನಮನ ಸಲ್ಲಿಸುತ್ತಾರೆ. ಈಗ ಪ್ರೇರಣಾ ಅವರ ಸೀಮಂತ ಸಮಾರಂಭದಲ್ಲೂ ಚಿರು ನೆನಪನ್ನು ಮಾಡಿಕೊಳ್ಳಲಾಗಿದೆ. ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್ ಹೌಸ್ನಲ್ಲೇ ಸೀಮಂತ ನಡೆದಿದೆ. ಇಡೀ ಫಾರ್ಮ್ ಹೌಸ್ ಸಿಂಗಾರಗೊಂಡಿತ್ತು. ಬಂಧು-ಬಳಗದವರು ಆಗಮಿಸಿ ಪ್ರೇರಣಾಗೆ ಆಶೀರ್ವಾದ ಮಾಡಿದ್ದಾರೆ.
ಧ್ರುವ ಅವರು ಈ ಕಾರ್ಯಕ್ರಮವನ್ನು ದೊಡ್ಡ ಹೋಟೆಲ್ನಲ್ಲಿ ಮಾಡಬಹುದು. ಆದರೆ ಅವರು ಅಣ್ಣನ ಸಮಾಧಿ ಹತ್ತಿರ ಮಾಡಿದ್ದಾರೆ. ಅವರಿಗೆ ಅಣ್ಣನ ಮೇಲೆ ಇರುವ ಪ್ರೀತಿ ಯಾವಾಗಲೂ ಶಾಶ್ವತ’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಅವರು ಬ್ಯುಸಿ ಆಗಿದ್ದಾರೆ. ‘ಮಾರ್ಟಿನ್’, ‘ಕೆಡಿ’ ಮುಂತಾದ ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಧ್ರುವ ಮತ್ತು ಪ್ರೇರಣಾ ಅವರು 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ 2022ರ ಅಕ್ಟೋಬರ್ನಲ್ಲಿ ಹೆಣ್ಣು ಮಗು ಜನಿಸಿತು.