ಶಾರುಖ್ ಖಾನ್ ಜೊತೆ ನಟಿಸಿದ್ದ ಹಿರಿಯ ನಟ ರಿಯೋ ಕಪಾಡಿಯಾ ನಿಧನ

0
91

ಚಕ್‌ ದೆ ಇಂಡಿಯಾ, ಹ್ಯಾಪಿ ನ್ಯೂ ಇಯರ್‌ ಹಾಗೂ ಮರ್ದಾನಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಬಾಲಿವುಡ್‌ ನಟ ರಿಯೋ ಕಪಾಡಿಯಾ (66) ಗುರುವಾರ (ಇಂದು) ನಿಧನರಾಗಿದ್ದಾರೆ ಎಂದು ಸ್ನೇಹಿತ ಫೈಸಲ್‌ ಮಲಿಕ್‌ ತಿಳಿಸಿದ್ದಾರೆ.

ಕಳೆದ ವರ್ಷ ಕಪಾಡಿಯಾಗೆ ಕ್ಯಾನ್ಸರ್‌ ಕಾಯಿಲೆ ಇರುವುದು ಪತ್ತೆಯಾಗಿತ್ತು. ಅವರ ಅಂತ್ಯಕ್ರಿಯೆ ಬುಧವಾರ (ಸೆ.15) ಗೋರೆಗಾಂವ್‌ನ ಶಿವಧಾಮ ಶಂಶಾನ ರುದ್ರ ಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ ಮರಿಯಾ ಫರಾ, ಮಕ್ಕಳಾದ ಅಮನ್‌ ಮತ್ತು ವೀರ್‌ ಅವರನ್ನ ಅಗಲಿದ್ದಾರೆ.

ರಿಯೋ ಕಪಾಡಿಯಾ ಖುದಾ ಹಾಫಿಜ್, ದಿ ಬಿಗ್ ಬುಲ್, ಏಜೆಂಟ್ ವಿನೋದ್ ಸೇರಿದಂತೆ ಹಲವು ಚಿತ್ರಗಳಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ‘ಮೇಡ್ ಇನ್ ಹೆವೆನ್-2’ ಸಂಚಿಕೆಗಳಲ್ಲೂ ಕಾಣಿಸಿಕೊಂಡಿದ್ದರು. ಸಿನಿಮಾಗಳಲ್ಲಿ ಮಾತ್ರವಲ್ಲದೇ ‘ಸಪ್ನೆ ಸುಹಾನೆ ಲಡಕ್ಪಾನ್ ಕೆ ಮತ್ತು ‘ಸಿದ್ಧಾರ್ಥ್ ತಿವಾರಿ ಅವರ ‘ಮಹಾಭಾರತ’ದಂತಹ ಸೀರಿಯಲ್‌ಗಳಲ್ಲೂ ಪಾತ್ರ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here