ಡ್ರಗ್ಸ್ ಪ್ರಕರಣ: ತೆಲುಗಿನ ‘ಬೇಬಿ’ ಸಿನಿಮಾ ತಂಡಕ್ಕೆ ನೊಟೀಸ್

By: Ommnews

Date:

Share post:

ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆ ಆಗಿದ್ದ ‘ಬೇಬಿ‘ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ನಾಯಕಿ ಪ್ರೇಮದ ಹೆಸರಲ್ಲಿ ಇಬ್ಬರು ಯುವಕರನ್ನು ಒಮ್ಮೆಲೆ ಮೋಸ ಮಾಡುವ ಕತೆಯನ್ನು ಆ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಯುವ ಸಮುದಾಯ ಬಹುವಾಗಿ ಮೆಚ್ಚಿಕೊಂಡಿದೆ. ಯುವತಿಯರ ವ್ಯಕ್ತಿತ್ವವನ್ನು ಋಣಾತ್ಮಕವಾಗಿ ಚಿತ್ರಿಸಿರುವುದಕ್ಕೆ ಕೆಲವರು ಆಕ್ಷೇಪವನ್ನೂ ಸಿನಿಮಾ ಬಗ್ಗೆ ವ್ಯಕ್ತಪಡಿಸಿದ್ದಾರೆ. ಏನೇ ಆದರು ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದ್ದು, ಸಿನಿಮಾ ತಂಡ ಖುಷಿಯಲ್ಲಿದೆ. ಆದರೆ ಇದೀಗ ಹೈದರಾಬಾದ್ ಪೊಲೀಸರು ಸಿನಿಮಾ ತಂಡಕ್ಕೆ ನೊಟೀಸ್ ನೀಡಿದ್ದಾರೆ.

Advertisement
Advertisement
Advertisement

ಇತ್ತೀಚೆಗಷ್ಟೆ ನಾರ್ಕೊಟಿಕ್ಸ್ ಬ್ಯೂರೋ ಹಾಗೂ ಹೈದರಾಬಾದ್ ಪೊಲೀಸರು ಜಂಟಿಯಾಗಿ ಮಾದಾಪುರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್​ಗಳ ಜೊತೆಗೆ ನಿರ್ಮಾಪಕ, ಮಾಜಿ ಸಂಸದರೊಬ್ಬರ ಮಗ ಸಹ ಬಂಧನಕ್ಕೊಳಗಾಗಿದ್ದಾನೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಸಿವಿ ಆನಂದ್, ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆ ಬಗ್ಗೆ ದೃಶ್ಯಗಳ ಬಗ್ಗೆ ಮಾತನಾಡುತ್ತಾ, ‘ಬೇಬಿ’ ಸಿನಿಮಾ ತಂಡಕ್ಕೆ ನೊಟೀಸ್ ನೀಡುವುದಾಗಿ ಹೇಳಿದ್ದಾರೆ.

”ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆ ಬಗ್ಗೆ ದೃಶ್ಯಗಳನ್ನು ಪ್ರದರ್ಶಿಸಬಾರದು. ಇತ್ತೀಚೆಗಿನ ಹಿಟ್ ಸಿನಿಮಾ ‘ಬೇಬಿ’ನಲ್ಲಿ ಡ್ರಗ್ಸ್ ಬಳಕೆ ಬಗ್ಗೆ ದೃಶ್ಯಗಳನ್ನು ಪ್ರದರ್ಶಿಸಲಾಗಿದೆ. ನಾವು ಬಿಡುಗಡೆ ಆಗುತ್ತಿರುವ ಎಲ್ಲ ಸಿನಿಮಾಗಳನ್ನು ಪರಿಶೀಲನೆ ನಡೆಸಲಿದ್ದು, ಡ್ರಗ್ಸ್ ಬಳಕೆಯನ್ನು ತೋರಿಸುವ ಸಿನಿಮಾಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈಗ ‘ಬೇಬಿ’ ಸಿನಿಮಾಕ್ಕೆ ಈ ವಿಷಯಕ್ಕೆ ಸಂಬಂಧಿಸಿದಂತೆ ನೊಟೀಸ್ ನೀಡಿದ್ದೇವೆ” ಎಂದಿದ್ದಾರೆ.

ಮಾತ್ರವಲ್ಲದೆ, ”ನಾವು ದಾಳಿ ನಡೆಸಿದ ಫ್ರೆಶ್ ಲಿವಿಂಗ್ ಅಪಾರ್ಟ್​ಮೆಂಟ್​ನಲ್ಲಿ ಇದ್ದ ದೃಶ್ಯಗಳು ‘ಬೇಬಿ’ ಸಿನಿಮಾದಲ್ಲಿ ತೋರಿಸಲಾಗಿರುವ ದೃಶ್ಯಗಳಿಗೆ ಸಾಕಷ್ಟು ಹೋಲಿಕೆ ಇದೆ. ‘ಬೇಬಿ’ ಸಿನಿಮಾನಲ್ಲಿ ಮಾದಕ ದ್ಯವ್ಯವನ್ನು ಹೇಗೆ ಬಳಸಬೇಕೆಂದು ತೋರಿಸುವ ದೃಶ್ಯಗಳು ಇವೆ. ಇದು ಅಪಾಯಕಾರಿ” ಎಂದು ಆಯುಕ್ತರು, ‘ಬೇಬಿ’ ಸಿನಿಮಾದಲ್ಲಿ ಡ್ರಗ್ಸ್ ಬಳಕೆಯ ಬಗ್ಗೆ ಇರುವ ದೃಶ್ಯಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಸಾರ ಮಾಡಿ ತೋರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ‘ಬೇಬಿ’ ಸಿನಿಮಾ ನಿರ್ದೇಶಕ ಸಾಯಿ ರಾಜೇಶ್, ”ನನಗೆ ಈಗಾಗಲೇ ಅಡ್ವೈಸರಿ ನೊಟೀಸ್ ಬಂದಿದೆ. ಡ್ರಗ್ಸ್ ಬಳಕೆಯ ಬಗ್ಗೆ ಮಾಹಿತಿ ನೀಡುವ ದೃಶ್ಯಗಳನ್ನು ತೋರಿಸದಂತೆ ಹೇಳಿದ್ದಾರೆ. ಆದರೆ ನಾವು ಸಿನಿಮಾದಲ್ಲಿ ಒಬ್ಬ ಸಾಮಾನ್ಯ ಹುಡುಗಿ ಕೆಟ್ಟ ಗೆಳೆಯರಿಂದಾಗಿ ಹೇಗೆ ಡ್ರಗ್ಸ್​ಗೆ ಕುಡಿತಕ್ಕೆ ದಾಸಳಾಗುತ್ತಾಳೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ಈಗಾಗಲೇ ಸಿನಿಮಾ ಸೆನ್ಸಾರ್ ಆಗಿರುವ ಕಾರಣದಿಂದಾಗಿ ಆ ದೃಶ್ಯಗಳನ್ನು ಈಗ ತೆಗೆಯಲು ಬರುವುದಿಲ್ಲ” ಎಂದಿದ್ದಾರೆ.

ಬೇಬಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟಿಸಿದ್ದು, ಸಿನಿಮಾವನ್ನು ಶ್ರೀನಿವಾಸ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಸಾಮಾನ್ಯ ಕುಟುಂಬದ ಯುವತಿಯೊಬ್ಬಾಕೆ ಕೆಟ್ಟ ಸಹವಾಸದಿಂದ ಕೆಟ್ಟ ಗುಣಗಳನ್ನು ಕಲಿತು, ತನ್ನ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಇಬ್ಬರು ಯುವಕರೊಟ್ಟಿಗೆ ಪ್ರೇಮದ ನಾಟಕ ಆಡುವ ಕತೆಯನ್ನು ಒಳಗೊಂಡಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section