ಬಿಜೆಪಿ ಸರಕಾರವೇ ಗಡಿಪಾರು ಆಗಲಿರುವ ಯುವಕರ ಮೇಲೆ ಕೇಸು ಹಾಕಿ ಈಗ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ : ಅಶೋಕ್ ರೈ

0
112

ಪುತ್ತೂರು: ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಕೆಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಸಂಬಂಧ ಪುತ್ತೂರಿನ ಕೆಲವು ಯುವಕರ ಮೇಲೆ ಗಡಿಪಾರು ನೋಟೀಸ್ ಜಾರಿಯಾಗಿದೆ. ಬಿಜೆಪಿ ಸರಕಾರವೇ ಈ ಯುವಕರ ಮೇಲೆ ಕೇಸು ಹಾಕಿ ಈಗ ಯುವಕರ ಪರ ಪ್ರತಿಭಟನೆಯ ನಾಟಕವಾಡುತ್ತಿದ್ದು ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಮಾಧ್ಯಮದ ಜೊತೆ ಮಾತನಾಡಿದ ಅವರು ಈ ವಿಚಾರದಲ್ಲಿ ಬಿಜೆಪಿ ನಾಯಕರು ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಉತ್ತಮ. ಯುವಕರನ್ನು ಬಳಕೆ ಮಾಡಿ ಅವರ ಮೇಲೆ ಕೇಸು ಹಾಕಿಸಿ ಅವರನ್ನು ಗಡಿಪಾರುಮಾಡುವಂತೆ ಮಾಡಿ ಆ ಬಳಿಕ ಅವರ ಪರ ಪ್ರತಿಭಟನೆಯ ನಾಟಕವಾಡುವುದು ಇವರ ಕೆಲಸವಾಗಿದೆ. ಇವರ ಸರಕಾರ ಇರುವಾಗಲೇ ಯುವಕರ ಮೇಲೆ ಕೇಸು ಹಾಕಿಸಿದ್ದಾರೆ ಬಿಜೆಪಿಯವರೇ ಕೇಸ್ ಹಿಂಪಡೆಸಬೇಕಿತ್ತು. ಇವರ ಲಾಭಕ್ಕಾಗಿ ಯುವಕರ ಮೇಲೆ ಕೇಸು ಹಾಕಿಸಿದ್ದಾರಲ್ಲ ಯುವಕರು ಆಲೋಚನೆ ಮಾಡಬೇಕು.

ಈಗ ಕಾಂಗ್ರೆಸ್ ಸರಕಾರದವರು ಗಡಿಪಾರು ಮಾಡಿದ್ದಾರೆ ಎಂದು ಬಿಜೆಪಿಯವರು ಪ್ರತಿಭಟನೆ ಮಾಡಲು ಮುಂದಾಗಿರುವುದು ಹೇಸಿಗೆಯ ವಿಚಾರವಾಗಿದೆ. ಯುವಕರನ್ನು ಅವರ ಲಾಭಕ್ಕಾಗಿ ಬಳಕೆ ಮಾಡಿ ಅವರಿಗೆ ದಿಕ್ಕು ದೆಸೆಯಿಲ್ಲದೆ ಮಾಡಿದ್ದಾರೆ. ಗಡಿಪಾರಾದ ಯುವಕರು ಕೃತ್ಯದಲ್ಲಿ ಭಾಗಿಯಾಗಿದ್ದಾರಾ ಎಂಬುದನ್ನು ಇಲಾಖೆ ಕೂಲಂಕುಶವಾಗಿ ತನಿಖೆ ಮಾಡುತ್ತದೆ ಈ ಬಗ್ಗೆ ನಾನು ಇಲಾಖೆಗೆ ಸೂಚನೆಯನ್ನು ನೀಡಿದ್ದೇನೆ. ಬಿಜೆಪಿಯವರು ನಾಟಕ ಮಾಡುವುದನ್ನು ಮೊದಲು ನಿಲ್ಲಿಸಬೇಕು ಮತ್ತು ಯುವಕರನ್ನು ಕೆಟ್ಟ ಕೆಲಸಗಳಿಗೆ ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here