ತೆಲಂಗಾಣದಲ್ಲಿ ನಿರ್ಮಾಣ ಹಂತದ ಕ್ರೀಡಾಂಗಣ ಕುಸಿತ – 3 ಕಾರ್ಮಿಕರು ಮೃತ್ಯು

0
83

ತೆಲಂಗಾಣ: ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಕನಕಮಾಮಿಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಒಳಾಂಗಣ ಕ್ರೀಡಾಂಗಣ ಕುಸಿದು ಮೂವರು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಬಿಹಾರ ಮೂಲದ ಬಬ್ಲು ಮತ್ತು ಪಶ್ಚಿಮ ಬಂಗಾಳದ ಸುನಿಲ್ ಎಂದು ಗುರುತಿಸಲಾಗಿದೆ.

ಟೇಬಲ್ ಟೆನಿಸ್ ಕ್ರೀಡಾಂಗಣದ ನಿರ್ಮಾಣ ಕಾರ್ಯವನ್ನು ಸುಮಾರು 14 ಕಾರ್ಮಿಕರು ಮಾಡುತ್ತಿದ್ದ ಸಮಯದಲ್ಲಿ ಸ್ಲ್ಯಾಬ್‌ ಕುಸಿತಗೊಂಡು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಇನ್ನು ಕುಸಿತಗೊಂಡ ತಕ್ಷಣ 11 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಅಧಿಕಾರಿಗಳು ತನಿಖೆಗಳನ್ನು ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here