ಭೋಪಾಲ್: ಚಿಂದ್ವಾರದಿಂದ ನರಸಿಂಗ್‍ಪುರ ಕಡೆ ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರದೇಶದ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರಿದ್ದ ಕಾರು ಅಪಘಾತಕ್ಕೀಡಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಈ ಘಟನೆ ಇಂದು (ಮಂಗಳವಾರ) ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ನಿರಂಜನ್ ಚಂದ್ರವನ್‍ಶಿ ಎಂದು ಗುರುತಿಸಲಾಗಿದೆ. ನಿರಂಜನ್ ಮಕ್ಕಳಾದ ನಿಖಿಲ್ ನಿರಂಜನ್ (7) ಮತ್ತು ಸಂಸ್ಕರ್ ನಿರಂಜನ್ (10) ಗಾಯಗೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ನಿರಂಜನ್ ತಮ್ಮ ಮಕ್ಕಳೊಂದಿಗೆ ಬೈಕ್‍ನಲ್ಲಿ ಮನೆಗೆ ಮರಳುತ್ತಿದ್ದರು.
ಘಟನೆಯಲ್ಲಿ ನಿರಂಜನ್ ಎಂಬವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇವರೆಲ್ಲರೂ ನಾಗ್ಪುರ ನಿವಾಸಿಗಳು. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಧೀರ್ ಜೈನ್ ತಿಳಿಸಿದ್ದಾರೆ.