ಲಾಟರಿ ಆಮಿಷ: 72.86 ಲ.ರೂ. ವಂಚನೆ

0
89

ಮಂಗಳೂರು: ಲಾಟರಿ ಹಣ ಬಂದಿರುವುದಾಗಿ ತಿಳಿಸಿ ಖಾತೆಯಿಂದ 72.86 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.

ಸತ್ಯಂ ಪಾಂಡೆ ಮತ್ತು ಮಿತ್ತಲ್‌ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ಅಪರಿಚಿತರಿಬ್ಬರು ವಾಟ್ಸ್‌ ಆಯಪ್‌ ಮೂಲಕ ದೂರುದಾರರೊಂದಿಗೆ ಮಾತನಾಡಿದ್ದರು.

ಅನಂತರ ವಾಟ್ಸ್‌ ಆಯಪ್‌ನಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದರು. ಒಂದು ದಿನ ದೂರುದಾರರಿಗೆ ಲಾಟರಿ ಹಣ ಬಂದಿರುವುದಾಗಿ, ಆ ಹಣವನ್ನು ಖಾತೆಗೆ ಜಮಾ ಮಾಡುವುದಾಗಿ, ಜಮಾ ಮಾಡಲು ತಾವು ನೀಡುವ 9038910423 ಸಂಖ್ಯೆಯನ್ನು ಬ್ಯಾಂಕ್‌ ಖಾತೆಗಳಿಗೆ ಲಿಂಕ್‌ ಮಾಡುವಂತೆ ತಿಳಿಸಿದ್ದರು. ಇದನ್ನು ನಂಬಿದ ದೂರುದಾರರು ತಮ್ಮ ಬ್ಯಾಂಕ್‌ ಖಾತೆಗಳಿಗೆ ಆ ಮೊಬೈಲ್‌ ಸಂಖ್ಯೆಯನ್ನು ಲಿಂಕ್‌ ಮಾಡಿಸಿದ್ದರು.

ಇದಾದ ಅನಂತರ ದೂರುದಾರರಿಗೆ ನಿವೃತ್ತಿಯಿಂದ ಬರಬೇಕಾದ ಹಣ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾತೆಗೆ ಅ. 26ರಂದು 50,55,118 ರೂ. ಮತ್ತು ಅ. 31ರಂದು ಇಂಡಿಯನ್‌ ಬ್ಯಾಂಕ್‌ ಖಾತೆಗೆ 22,31,798 ರೂ.ಗಳು ಬಂದಿತ್ತು. ಆ ಬಳಿಕ ಅಪರಿಚಿತ ವ್ಯಕ್ತಿಗಳು ದೂರುದಾರರ ಗಮನಕ್ಕೆ ತಾರದೆ ಅ. 26ರಿಂದ ನ. 2ರ ನಡುವೆ 72,86,916 ರೂ. ಅನಧಿಕೃತವಾಗಿ ಆನ್‌ಲೈನ್‌ ಮೂಲಕ ವರ್ಗಾಯಿಸಿ ವಂಚಿಸಿದ್ದಾರೆ.

ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here