ಮಂಗಳೂರು: ಗಮನ ಬೇರೆಡೆ ಸೆಳೆದು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಗರಿಸಿದ ಘಟನೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿದೆ.
ಭಾಗೀರಥಿ ಸರ ಕಳೆದುಕೊಂಡವರು. ಅವರು ತಮ್ಮ ಕುಟುಂಬದವರೊಂದಿಗೆ ನ.4ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನ.5ರಂದು ಬೆಳಗ್ಗೆ ಮಂಗಳೂರಿಗೆ ಬಂದಿದ್ದರು.
ಅಲ್ಲಿಂದ ಅವರೆಲ್ಲರೂ ಅವರ ಊರಾದ ಕಡಬಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಆಗ ಮೂವರು ಮಹಿಳೆಯರು ಆಗಮಿಸಿದರು.
ಅದರಲ್ಲಿ ಓರ್ವಳು ಭಾಗೀರಥಿ ಅವರ ಬಳಿ ಕುಳಿತುಕೊಂಡು ಹಣವನ್ನು ಕೆಳಗೆ ಬೀಳಿಸಿ “ಹಣ ಬಿದ್ದಿದೆ’ ಎಂದು ಗಮನವನ್ನು ಬೇರೆಡೆ ಸೆಳೆದು ಅವರ ಗಮನಕ್ಕೆ ಬಾರದಂತೆ ಕುತ್ತಿಗೆಯಲ್ಲಿದ್ದ ಸುಮಾರು 4 ಪವನ್ ತೂಕದ ಸುಮಾರು 1.28 ಲ.ರೂ. ಮೌಲ್ಯದ ಕರಿಮಣಿ ಸರ ಕಳವು ಮಾಡಿದ್ದಾಳೆ ಎಂದು ಬರ್ಕೆ ಪೊಲೀಸರಿಗೆ ದೂರು ನೀಡಲಾಗಿದೆ.