ಗಂಡ ಮತ್ತು ಹೆಂಡತಿಯ ವಿಪರೀತ ಜಗಳ ಹೆಂಡತಿಯ ಸಾವಿನೊಂದಿಗೆ ಅಂತ್ಯ

By: Ommnews

Date:

Share post:

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಚಾಪೆಲ್ಲ ಎಂಬಲ್ಲಿ ಗಂಡ ಮತ್ತು ಹೆಂಡತಿ ಜಗಳ ವಿಪರೀತ ಮಟ್ಟಕ್ಕೆ ತಿರುಗಿ ಹೆಂಡತಿಯ ಸಾವಿನೊಂದಿಗೆ ಅಂತ್ಯವಾದ ಘಟನೆ ಶನಿವಾರ ಸಂಜೆ ನಡೆದಿದೆ.

Advertisement
Advertisement
Advertisement

ಕುಸುಮ(39) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕುಸುಮ ಮತ್ತು ಆಕೆಯ ಪತಿ ಸಂಜೀವ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಶನಿವಾರ ಕೂಡ ಮಾತಿಗೆ ಮಾತು ಬೆಳೆದಿದೆ. ಕೋಪದ ಭರದಲ್ಲಿ ಇಬ್ಬರು ಕೂಡ ವಿಷ ಸೇವಿಸಿದ್ದಾರೆ.

ಈ ವಿಚಾರ ಸ್ಥಳೀಯರಿಗೆ ತಿಳಿದು ತಕ್ಷಣ ಅವರ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿದ್ದಾರೆ. ಅವರು ಬಂದು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನದಲ್ಲಿದ್ದಾಗ ಕುಸುಮ ಸಾವನ್ನಪಿದ್ದಾರೆ. ಸಂಜೀವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ .ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section