ಕಡಬ : ನ.3ರಂದು ಬೆಂಗಳೂರಿನ ತನ್ನ ರೂಮ್ ನಲ್ಲಿ ತಾರಾನಾಥ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಕಡಬ ತಾಲೂಕಿನ ಚಾರ್ವಕ ಗ್ರಾಮದ ಬೊಮ್ಮಳಿಕೆ ಪದ್ಮನಾಭ ಗೌಡರ ಪುತ್ರ.
ಹಲವು ವರ್ಷಗಳಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಎಂಬಲ್ಲಿ ಉದ್ಯೋಗ ಮಾಡಿಕೊಂಡಿದ್ದ ಅವರು ಪತ್ನಿ ಮತ್ತು ಪುತ್ರನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ.