ಹೈದರಾಬಾದ್: ಇಟಲಿಯ ಟಸ್ಕನಿಯಲ್ಲಿರುವ ಬೋರ್ಗೊ ಸ್ಯಾನ್ ಫೆಲಿಸ್ ರೆಸಾರ್ಟ್ ನಲ್ಲಿ ಟಾಲಿವುಡ್ ಸಿನಿರಂಗದ ಬ್ಯೂಟಿಫುಲ್ ಕಪಲ್ಸ್ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಅವರ ವಿವಾಹ ಬುಧವಾರ(ನ.1 ರಂದು) ನೆರವೇರಿದೆ.
ಮದುವೆಯ ಬಳಿಕದ ಫೋಟೋವನ್ನು ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ ತನ್ನ ಪತ್ನಿ ಲಾವಣ್ಯರೊಂದಿಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್ ಸೇರಿದಂತೆ ಅನೇಕ ಸೂಪರ್ ಸ್ಟಾರ್ ಕುಟುಂಬಗಳು ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ನವೆಂಬರ್ 5ರಂದು ಹೈದರಾಬಾದ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ ಎನ್ನಲಾಗಿದೆ.