ಅರೆಕಾಲಿಕ ಉದ್ಯೋಗ ಒದಗಿಸುವ ವೆಬ್‌ಸೈಟ್‌ ಬಳಸಿ ವ್ಯಕ್ತಿಯೊಬ್ಬರಿಗೆ ರೂ. 6.5 ಲಕ್ಷ ವಂಚನೆ

0
92

ಮಂಗಳೂರು: ಅರೆಕಾಲಿಕ ಉದ್ಯೋಗ ಒದಗಿಸುವ ‘ಟ್ಯೂನ್’ ಕಂಪನಿಯ ಏಜೆಂಟ್ ಎಂದು ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ, ಆನ್‌ಲೈನ್‌ನಲ್ಲಿ ಹಣಕಟ್ಟಿಸಿಕೊಂಡು ₹ 6.5 ಲಕ್ಷ ವಂಚಿಸಿದ ಬಗ್ಗೆ ನಗರದ ಸೆನ್‌ ಕ್ರೈಂ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಅರೆಕಾಲಿಕ ಉದ್ಯೋಗ ನಿರ್ವಹಿಸುವ ವೆಬ್ ಸೈಟ್ ಕೊಂಡಿಯನ್ನು ಟೆಲಿಗ್ರಾಮ್ ಖಾತೆ ಮೂಲಕ ಕಳುಹಿಸಿದ್ದರು. ಟ್ಯೂನ್ ಕಂಪನಿಯ ಉತ್ಪನ್ನಗಳಿಗೆ ರೇಟಿಂಗ್ಸ್ ನೀಡಿದರೆ ಕಮಿಷನ್ ಮತ್ತು ಬೊನಸ್ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಕೆಲಸ ಆರಂಭಿಸಲು ಮೂಲ ದರ ತೆರಬೇಕೆಂದು ಸೂಚಿಸಿದ್ದರು.ಹಂತಹಂತವಾಗಿ ಆ.18ರಿಂದ 26ರ ನಡುವೆ ಒಟ್ಟು ₹ 6.5 ಲಕ್ಷ ಕಟ್ಟಿಸಿಕೊಂಡು ಹಣ ಮರಳಿಸದೇ ವಂಚಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here