ನೀತಾ ಅಂಬಾನಿಗೆ ಜಾಗತಿಕ ನಾಯಕತ್ವ ಪ್ರಶಸ್ತಿ

0
114

ನವದೆಹಲಿ: ರಿಲಯನ್ಸ್‌ ಫೌಂಡೇಷನ್‌ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ಅಮೆರಿಕ-ಭಾರತ ಕಾರ್ಯತಂತ್ರ ಸಹಭಾಗಿತ್ವ ವೇದಿಕೆ ವತಿಯಿಂದ ಅತ್ಯುನ್ನತ ಜಾಗತಿಕ ನಾಯಕತ್ವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಫೋರಂನ ಅಧ್ಯಕ್ಷರಾದ ಜಾನ್‌ ಚೇಂಬರ್ಸ್‌ ಅವರು ನೀತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನೀತಾ ಅವರು, ಅವರ ನೇತೃತ್ವದಲ್ಲಿಯೇ ರಿಲಯನ್ಸ್‌ ಫೌಂಡೇಷನ್‌ ಶಿಕ್ಷಣ, ಕಲೆ, ಕ್ರೀಡೆ, ಆರೋಗ್ಯ, ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಮೂಲಕ ಕೋಟ್ಯಂತರ ಭಾರತೀಯರನ್ನು ತಲುಪಿದೆ. ವಿಶೇಷವಾಗಿ ಲಿಂಗ ಅಸಮಾನತೆ ತೊಡೆದು, ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವವರಲ್ಲಿ ನೀತಾ ಅವರ ಪಾತ್ರ ಬಹುಮುಖ್ಯ ಹಾಗೂ ಶ್ಲಾಘನೀಯವಾದ ಕಾರಣ ಈ ಪ್ರಶಸ್ತಿ ಕೊಡಮಾಡುತ್ತಿರುವುದಾಗಿಯೂ ತಿಳಿಸಿದೆ.

LEAVE A REPLY

Please enter your comment!
Please enter your name here