ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ತೋಟಕ್ಕೆ ನುಗ್ಗಿದ ಕಾರು

0
94

ಸಂಪಾಜೆ : ಸುಳ್ಯ ತಾಲೂಕಿನ ಸಂಪಾಜೆಯ ಚೌಕಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರೊಂದು ಕಬ್ಬಿನ ತೋಟಕ್ಕೆ ನುಗ್ಗಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಮಡಿಕೇರಿಗೆ ಹೋಗುತ್ತಿದ್ದ ಕಾರು ಸಂಪಾಜೆಯ ಶಂಕರ್ ಪ್ರಸಾದ್ ರೈ ಅವರ ತೋಟಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿ ದಂಪತಿ ಸೇರಿದಂತೆ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here