ಜೆಸಿಬಿ ಬಿಡಿಭಾಗಗಳನ್ನು ಕದ್ದು ಪರಾರಿಯಾಗುತ್ತಿದ್ದ ಮೂವರನ್ನು ಹಿಡಿದು ಪೊಲೀಸರಿಗೂಪ್ಪಿಸಿದ ತಂಡ

0
88

ವಿಟ್ಲ : ಸಾಲೆತ್ತೂರು ಗ್ರಾಮದ ಮೆದು ನಿವಾಸಿ ಸಿದ್ದಿಕ್ ಹಾಗೂ ಆತನೊಂದಿಗಿದ್ದ ಇಬ್ಬರು ಜೆಸಿಬಿ ಬಿಡಿ ಭಾಗಗಳನ್ನು ಕದ್ದು ಆಟೋ ರಿಕ್ಷಾವೊಂದರಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ತಂಡವೊಂದು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ – ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ನಡೆದಿದೆ.

ಕನ್ಯಾನ ಸಮೀಪ ಸಿದ್ದಿಕ್ ಹಾಗೂ ಬಿಹಾರ ಮೂಲದ ಓರ್ವ ಹಾಗೂ ಜಾರ್ಖಂಡ್ ಮೂಲದ ಓರ್ವ ಸೇರಿಕೊಂಡು ರಾತ್ರಿ ವೇಳೆ ಜೆಸಿಬಿ ಬಿಡಿ ಭಾಗಗಳನ್ನು ಕಳವು ಮಾಡಿ ಅದನ್ನು ಮಾರಾಟ ಮಾಡಲು ವಿಟ್ಲದ ಗುಜಿರಿ ಅಂಗಡಿ ತಲುಪಿದಾಗ ಕಳವುಗೈದ ವಸ್ತುಗಳನ್ನು ಹುಡುಕಿಕೊಂಡು ತಂಡವೊಂದು ಅಲ್ಲಿಗೆ ಬಂದಿತ್ತು.

ಈ ಬಗ್ಗೆ ತಿಳಿದ ಮೂವರು ಅಲ್ಲಿಂದ ಆಟೋದಲ್ಲಿ ಪರಾರಿಯಗಲು ಯತ್ನಿಸಿದರು. ಇದನ್ನು ಅರಿತ ತಂಡ ಕಡಂಬು ಸಮೀಪ ಅಡ್ಡಕಟ್ಟಿ ಆಟೋಸಹಿತ ಮೂವರನ್ನು ವಿಟ್ಲ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here