ಪುತ್ತೂರು : ಟೀಮ್ ಮಾತೆರ್ಲ ಒಂಜೇ, ಪುತ್ತೂರು ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ವಿಭಾಗ ಮತ್ತು ವಿಷಯ :
1.8ನೇ ತರಗತಿಯಿಂದ 10ನೇ ತರಗತಿವರೆಗೆ – ತುಳುನಾಡಿನಲ್ಲಿ ದೀಪಾವಳಿ ಹಬ್ಬ
2. ಪಿಯುಸಿ ವಿದ್ಯಾರ್ಥಿಗಳಿಗೆ – ತುಳುನಾಡಿನ ದೀಪಾವಳಿಯಲ್ಲಿ ಗೋಪೂಜೆ ಮಹತ್ವ
3. ಪದವಿ ವಿದ್ಯಾರ್ಥಿಗಳಿಗೆ – ಪ್ರಸ್ತುತ ಕಾಲದಲ್ಲಿ ಬದಲಾದ ದೀಪಾವಳಿ ಹಬ್ಬ
ನಿಬಂಧನೆಗಳು:
- * ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತದೆ.
- * ಕನ್ನಡ ಭಾಷೆಯಲ್ಲಿ ಮಾತ್ರ ಪ್ರಬಂಧ ಬರೆಯಲು ಅವಕಾಶ.
- * ಪ್ರಬಂಧ ಈ ಹಿಂದೆ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿರಬಾರದು. ನಕಲು ಪ್ರತಿಗಳಿಗೆ ಅವಕಾಶವಿಲ್ಲ.
- * ಪ್ರಬಂಧಗಳು A4 sheet ನಲ್ಲಿ ಒಂದು ಪುಟ ಮೀರದಂತಿರಬೇಕು.
- * ಪ್ರಬಂಧ ಬರೆದ ಹಾಳೆಯ ಹಿಂಭಾಗದಲ್ಲಿ ವಿದ್ಯಾರ್ಥಿಯ ಹೆಸರು, ತರಗತಿ, ದೂರವಾಣಿ ಸಂಖ್ಯೆ, ಶಾಲೆಯ ಮುಖ್ಯೋಪಾಧ್ಯಾಯರ ಸಹಿ, ಸೀಲ್ ಮತ್ತು ಕಾಲೇಜ್ ವಿಭಾಗದಲ್ಲಿ ಪ್ರಾಂಶುಪಾಲರ ಸಹಿ, ಸೀಲ್ ಕಡ್ಡಾಯವಾಗಿರಬೇಕು.
- * ಸಹಿ, ಸೀಲ್ ಇಲ್ಲದ ಪ್ರಬಂಧಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
- * ಪ್ರಶಸ್ತಿ ವಿಜೇತ ಶಿಕ್ಷಕರಿಂದ ಪ್ರಬಂಧದ ಆಯ್ಕೆ ನಡೆಸಲಾಗುತ್ತದೆ.
- * ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ.
- * ಬಹುಮಾನ ವಿಜೇತರಿಗೆ ದೂರವಾಣಿ ಮೂಲಕ ತಿಳಿಸಲಾಗುತ್ತದೆ.
- * ವಿಜೇತ ಪ್ರಬಂಧಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.
- * ದಿನಾಂಕ : 10.11.2023ರ ಒಳಗೆ ಕಹುಹಿಸಿದ ಪ್ರಬಂಧಗಳನ್ನು ಸ್ಪರ್ಧೆಯಲ್ಲಿ ಪರಿಗಣಿಸಲಾಗುತ್ತದೆ.
- ಆಸಕ್ತ ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.
- ಟೀಮ್ ಮಾತೆರ್ಲ ಒಂಜೇ ಪುತ್ತೂರು, C/o ಶ್ರೀ ಮಾತಾ ಗ್ರಾಫಿಕ್ಸ್, ಪಟ್ಲ ಕಾಂಪ್ಲೆಕ್ಸ್ ಕಲ್ಲೇಗ, ನೆಹರು ನಗರ ಪೋಸ್ಟ್, ಪುತ್ತೂರು, ದಕ್ಷಿಣ ಕನ್ನಡ – 574203
- ಮೊಬೈಲ್: 9741316365, 9902871713, 7411457167