ಸಿಂಗರ್ ಅರ್ಮಾನ್ ಮಲಿಕ್ ಗೆಳತಿ ಆಶ್ನಾಗೆ ಅಫಿಷಿಯಲ್ ಆಗಿ ರಿಂಗ್ ತೊಡಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅದರಲ್ಲಿ ಭಾವಿ ಪತ್ನಿಗೆ ರಿಂಗ್ ಹಾಕಿ, ಸಿಹಿ ಮುತ್ತು ಕೊಟ್ಟಿರುವ ಎಂಗೇಜ್‌ಮೆಂಟ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಕೆಲ ತಿಂಗಳುಗಳ ಹಿಂದೆ ಗೆಳತಿ ಆಶ್ನಾಗೆ ಪ್ರಪೋಸ್ ಮಾಡುತ್ತಿರುವ ಫೋಟೋಗಳನ್ನ ಶೇರ್ ಮಾಡಿ ರಿಲೇಷನ್‌ಶಿಪ್ ಬಗ್ಗೆ ಅರ್ಮಾನ್ ತಿಳಿಸಿದ್ದರು.
ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.