ಪಾಕಿಸ್ತಾನ ವಿರುದ್ಧ 62 ರನ್‌ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ

By: Ommnews

Date:

Share post:

ಬೆಂಗಳೂರು : ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ವಿರುದ್ಧ 62 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

Advertisement
Advertisement
Advertisement

ಆಸೀಸ್‌ ನೀಡಿದ 368 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 45.3 ಓವರ್‌ಗಳಲ್ಲೇ 305 ರನ್‌ಗಳಿಗೆ ಸರ್ವಪತನ ಕಂಡಿದ್ದು, ಹೀನಾಯ ಸೋಲನುಭವಿಸಿದೆ.

ಪಾಕ್‌ ಮೊದಲ ವಿಕೆಟ್‌ಗೆ 21.1 ಓವರ್‌ಗಳಲ್ಲಿ 134 ರನ್‌ಗಳ ಜೊತೆಯಾಟ ನೀಡಿತ್ತು. ಒಂದೆಡೆ ವಿಕೆಟ್‌ ಕಳೆದುಕೊಂಡಿದ್ದರೂ ರನ್‌ ಕಲೆಹಾಕುತ್ತಿದ್ದ ಪಾಕ್‌ 38 ಓವರ್‌ಗಳಲ್ಲಿ 265 ರನ್‌ ಗಳಿಸಿ ವಿಶ್ವದಾಖಲೆಯ ಜಯ ಸಾಧಿಸುವ ಕನಸು ಕಂಡಿತ್ತು. ಆದ್ರೆ 39ನೇ ಓವರ್‌ನ 5ನೇ ಎಸೆತದಲ್ಲಿ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಇಫ್ತಿಕಾರ್‌ ಅಹ್ಮದ್‌ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳುತ್ತಿದ್ದಂತೆ ಪಾಕ್‌ ತಂಡದ ಆಟಗಾರರು ತರಗೆಲೆಗಳಂತೆ ಉದುರಿಹೋದರು. 39ನೇ ಓವರ್‌ನಿಂದ 31 ಎಸೆತಗಳ ಅಂತರದಲ್ಲೇ ನಾಲ್ಕು ವಿಕೆಟ್‌ ಕಳೆದುಕೊಂಡು ಪಾಕಿಸ್ತಾನ ಗೆಲುವಿನ ನಿರೀಕ್ಷೆಯನ್ನೇ ಕಳೆದುಕೊಂಡಿತು. ಆರಂಭದಲ್ಲಿ ಅಬ್ಬರಿಸಿದ ಪಾಕ್‌ ಆಟಗಾರರು ಡೆತ್‌ ಓವರ್‌ನಲ್ಲಿ ಮಕಾಡೆ ಮಲಗಿದರು. ಇದರಿಂದ ಆಸೀಸ್‌ಗೆ ಜಯದ ಹಾದಿ ಸುಲಭವಾಯಿತು.

ಪಾಕ್‌ ಪರ ಆರಂಭಿಕರಾಗಿ ಕಣಕ್ಕಿಳಿದ ಅಬ್ದುಲ್ಲಾ ಶಫೀಕ್ 61 ಎಸೆತಗಳಲ್ಲಿ 64 ರನ್‌ (7 ಬೌಂಡರಿ, 2 ಸಿಕ್ಸರ್)‌, ಇಮಾಮ್‌ ಉಲ್‌ ಹಕ್‌ 70 ರನ್‌ (71 ಎಸೆತ, 10 ಬೌಂಡರಿ) ಗಳಿಸಿದ್ರೆ ನಾಯಕ ಬಾಬರ್‌ ಆಜಂ ಮತ್ತೆ ಕಳಪೆ ಪ್ರದರ್ಶನ ನೀಡಿದರು. 14 ಎಸೆತಗಳಲ್ಲಿ 18 ರನ್‌ ಗಳಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು. ಮೊಹಮ್ಮದ್‌ ರಿಜ್ವಾನ್‌ 46 ರನ್‌ (40 ಎಸೆತ, 5 ಬೌಂಡರಿ), ಸೌದ್‌ ಶಕೀಲ್‌ 31 ಎಸೆತಗಳಲ್ಲಿ 30 ರನ್‌ ಗಳಿಸಿದ್ರೆ, ಇಫ್ತಿಕಾರ್‌ ಅಹ್ಮದ್‌ 26 ರನ್‌, ಮೊಹಮ್ಮದ್‌ ನವಾಜ್‌ 14 ರನ್‌, ಶಾಹೀನ್‌ ಶಾ ಅಫ್ರಿದಿ 10 ರನ್‌, ಹಸನ್‌ ಅಲಿ 8 ರನ್‌ ಗಳಿಸಿದ್ರೆ, ಉಸ್ಮಾನ್‌ ಮೀರ್‌ ಶೂನ್ಯಕ್ಕೆ ನಿರ್ಗಮಿಸಿದರು. ಹ್ಯಾರಿಸ್‌ ರೌಫ್‌ ಯಾವುದೇ ರನ್‌ ಗಳಿಸದೇ ಅಜೇಯರಾಗುಳಿದರು.

ಆಸೀಸ್‌ ಪರ ಆಡಂ ಝಂಪಾ 4 ವಿಕೆಟ್‌ ಕಿತ್ತರೆ, ಮಾರ್ಕಸ್‌ ಸ್ಟೋಯ್ನಿಸ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ ತಲಾ 2 ವಿಕೆಟ್‌ ಹಾಗೂ ಮಿಚೆಲ್‌ ಸ್ಟಾರ್ಕ್‌, ಜೋಸ್‌ ಹ್ಯಾಜಲ್‌ವುಡ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ಹಾಗೂ ಡೇವಿಡ್ ವಾರ್ನರ್ ಜೋಡಿ ಆರಂಭದಿಂದಲೇ ಪಾಕ್ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿತು. 13 ಓವರ್‌ಗಳಲ್ಲೇ 100 ರನ್‌ಗಳ ಗಡಿ ದಾಟಿತ್ತು. ಮಿಚೆಲ್ ಮಾರ್ಷ್ 108 ಎಸೆತಗಳಲ್ಲಿ 121 ರನ್ (10 ಬೌಂಡರಿ, 9 ಸಿಕ್ಸರ್) ಬಾರಿಸಿದರೆ, 124 ಎಸೆತಗಳನ್ನು ಎದುರಿಸಿದ ಡೇವಿಡ್ ವಾರ್ನರ್ 14 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 163 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಈ ಜೋಡಿ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ರನ್ ವೇಗವೂ ಕಡಿಮೆಯಾಯಿತು. ಜೊತೆಗೆ ಆಸೀಸ್ ಒಂದೊಂದೇ ವಿಕೆಟ್‌ಕಳನ್ನು ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ 400 ರನ್‌ಗಳನ್ನು ಬಾರಿಸುವ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಲಿಯಾ 367 ರನ್‌ಗಳಿಗೆ ತೃಪ್ತಿಪಟ್ಟುಕೊಂಡಿತು.

ಉಳಿದಂತೆ ಸ್ಟೀವ್ ಸ್ಮಿತ್‌ 7 ರನ್, ಮಾರ್ಕಸ್ ಸ್ಟೋಯ್ನಿಸ್ 21 ರನ್, ಜೋಶ್ ಇಂಗ್ಲಿಸ್ 13 ರನ್, ಮಾರ್ನಸ್ ಲಾಬುಶೇನ್ 8 ರನ್, ಮಿಚೆಲ್ ಸ್ಟಾರ್ಕ್ 2 ರನ್ ಗಳಿಸಿದ್ರೆ, ಸ್ಫೋಟಕ ಬ್ಯಾಟ್ಸ್ಮ್ಯಾನ್ ಗ್ಲೇನ್ ಮ್ಯಾಕ್ಸ್‌ವೆಲ್‌ ಮತ್ತು ಜೋಶ್ ಹ್ಯಾಜಲ್‌ವುಡ್ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಪ್ಯಾಟ್ ಕಮ್ಮಿನ್ಸ್ 6 ರನ್ ಹಾಗೂ ಆಡಂ ಝಂಪಾ 1 ರನ್ ಗಳಿಸಿ ಅಜೇಯರಾಗುಳಿದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section