ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನವನ್ನು ಸ್ಫೂರ್ತಿ ದಿನ ಹೆಸರಿನಲ್ಲಿ ಆಚರಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು. ಈ ಹಿಂದಿನ ಸರಕಾರ ಘೋಷಣೆ ಮಾಡಿತ್ತು. ಆದರೆ, ಚುನಾವಣೆ ಕಾರಣದಿಂದಾಗಿ ಆಚರಿಸಲು ಆಗಿಲ್ಲ.
ಕಲೆ ಮತ್ತು ತಂತ್ರಜ್ಞಾನದ ಮೂಲಕ ವಿದೇಶಿ ಕಲಾವಿದರಿಂದ ತಯಾರಾದ ಪಿಆರ್‌ಕೆ ಕಲಾಕೃತಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅನಾವರಣ ಆಗಿದೆ. ಪುನೀತ್ ಹುಟ್ಟು ಹಾಕಿರೋ ಪಿಆರ್‌ಕೆ ಸ್ಟುಡಿಯೋಸ್ ಸಹಯೋಗದಲ್ಲಿ ಅಪ್ಪು ಕಲಾಕೃತಿ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ಕುಟುಂಬದ ಜೊತೆ ಸಿಎಂ ಸಿದ್ದರಾಮಯ್ಯ ಕೂಡ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ರಾಘಣ್ಣ ಮಾತನಾಡಿ,ಈ ತಿಂಗಳ 29ಕ್ಕೆ ಅಪ್ಪು ಅಗಲಿ ಎರಡು ವರ್ಷ ಆಗಲಿದೆ. ಇಂದು ಈ ಪ್ರತಿಮೆ ಪ್ರೀತಿಯಿಂದ ತಯಾರಾಗಿದೆ. ಈ ಪ್ರತಿಮೆಯನ್ನು ಕಷ್ಟ ಪಟ್ಟು ಮಾಡಿಲ್ಲ, ಇಷ್ಟ ಪಟ್ಟು ಮಾಡಿದ್ದಾರೆ ಎಂದರು.