ನವದೆಹಲಿ : 235 ಭಾರತೀಯರನ್ನು ಹೊತ್ತ ವಿಶೇಷ ವಿಮಾನದಲ್ಲಿ ಭಾರತೀಯರ ಎರಡನೇ ತಂಡ ಇಂದು ಮುಂಜಾನೆ ಯುದ್ಧ ಪೀಡಿತ ಇಸ್ರೇಲ್‌ನಿಂದ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಆರಂಭವಾದ ಯುದ್ದದ ಬಳಿಕ ಇಸ್ರೇಲ್ ನಲ್ಲಿ ಸಾವಿರಾರು ಭಾರತೀಯರು ಸಿಲುಕಿಕೊಂಡಿದ್ದರು ಆ ಬಳಿಕ ಭಾರತ ತಮ್ಮ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಉದ್ದೇಶದಿಂದ ‘ಆಪರೇಷನ್ ಅಜಯ್’ ಅಡಿಯಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಇದರ ಮೊದಲ ಭಾಗವಾಗಿ ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳನ್ನು ಹೊತ್ತ ವಿಶೇಷ ವಿಮಾನ ಶುಕ್ರವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಇದೀಗ ಅದರ ಮುಂದುವರೆದ ಭಾಗವಾಗಿ ಎರಡನೇ ವಿಮಾನ ಶನಿವಾರ ಮುಂಜಾನೆ 235 ಭಾರತೀಯರನ್ನು ಹೊತ್ತು ತಾಯ್ನಾಡಿಗೆ ಬಂದಿಳಿದಿದೆ.