ಟೆಲ್ ಅವಿವ್: ಗಾಜಾದ ಮೇಲೆ ಸಂಪೂರ್ಣ ಮುತ್ತಿಗೆ ಹಾಕಿರುವ ಇಸ್ರೇಲ್, ಪ್ರತೀಕಾರದ ಬಾಂಬ್ ದಾಳಿಯಾಗಿ ರಾತ್ರೋರಾತ್ರಿ ಗಾಜಾದಾದ್ಯಂತ ವೈಮಾನಿಕ ದಾಳಿ ನಡೆಸಿತು. ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ದಾಳಿಯಲ್ಲಿ ಕನಿಷ್ಠ 900 ಜನರು ಸಾವನ್ನಪ್ಪಿದ್ದಾರೆ ಮತ್ತು 4,600 ಜನರು ಗಾಯಗೊಂಡಿದ್ದಾರೆ. ವಾರಾಂತ್ಯದ ಹಮಾಸ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,200 ಮೀರಿದೆ ಎಂದು ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ತಿಳಿಸಿದೆ.
ಗಾಜಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 15 ಪ್ಯಾಲೇಸ್ತೀನಿಯರು ಸಾವನ್ನಪ್ಪಿದ್ದರೆ, ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ. ಬುಧವಾರ ರಾತ್ರಿ, ಇಸ್ರೇಲ್ ಗಾಜಾದಾದ್ಯಂತ ವೈಮಾನಿಕ ದಾಳಿ ನಡೆಸಿದ ಪರಿಣಾಮ 900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.