ಯಾದಗಿರಿ : ಲೋಡ್ ಶೆಡ್ಡಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಶರಣಬಸಪ್ಪ ದರ್ಶನಾಪುರ ಅವರು, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಾಗಿಲ್ಲ. ಜಲ ವಿದ್ಯುತ್ ಮತ್ತು ಥರ್ಮಲ್ ಪ್ಲಾಂಟ್‍ನಲ್ಲಿ ನಮಗೆ ಅವಶ್ಯಕತೆ ಇದ್ದಾಗ ಮಾತ್ರ ಉತ್ಪಾದನೆ ಮಾಡುತ್ತೇವೆ. ಅವಶ್ಯಕತೆ ಇಲ್ಲದ ಕಾರಣ ರಾಯಚೂರು ಥರ್ಮಲ್ ಪ್ಲಾಂಟ್ ಬಂದ್ ಮಾಡಿದ್ದೇವೆ ಎಂದು ಹೇಳಿದರು.
ನಮ್ಮಲ್ಲಿ ಈಗ ಮೂರು ಯೂನಿಟ್ ಚಾಲ್ತಿಯಲ್ಲಿದೆ. ಅಗತ್ಯವಿರುವಾಗ ಮಾತ್ರ ಉಳಿದ ಪ್ಲಾಂಟ್‍ಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.