ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಮಂದಿ ಹಾಗೂ ಪಿಂಡ ಪ್ರಧಾನಕ್ಕೆಂದು ಬಂದಿದ್ದ ಓರ್ವನನ್ನು ಸೇರಿ ಒಟ್ಟು 8 ಜನರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಮುಖ್ಯ ಕಡಲ ತೀರದಲ್ಲಿ ನಡೆದಿದೆ.
ಪ್ರವಾಸಿಗರನ್ನು ಪರಶುರಾಮ (44), ರುಕ್ಮಿಣಿ (38), ಧೀರಜ್ (14), ಅಕ್ಷರ (14), ಖುಷಿ (13), ದೀಪಿಕಾ ಹಾಗೂ ನಂದ ಕಿಶೋರ (10) ಹಾಗೂ ಪಿಂಡ ಪ್ರಧಾನಕ್ಕೆಂದು ಬಂದಿದ್ದ ಹುಬ್ಬಳ್ಳಿಯ ಎಲ್.ವಿ.ಪಾಟೀಲ್ (30) ಎಂದು ಗುರುತಿಸಲಾಗಿದೆ.
ಕುಟುಂಬಸ್ಥರು ಹುಬ್ಬಳ್ಳಿಯಿಂದ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದರು.
ಲೈಫ್‌ಗಾರ್ಡ್ ಸಿಬ್ಬಂದಿ ಶಿವಪ್ರಸಾದ್ ಅಂಬಿಗ ಮತ್ತು ಲೋಕೇಶ್ ಹರಿಕಾಂತ ಎಂಬವರು ರಕ್ಷಣೆ ಮಾಡಿದ್ದು, ಘಟನೆಯ ಕುರಿತು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.