ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ರಿಷಬ್ ಶೆಟ್ಟಿ ಸಿನೆಮಾ

0
86

ರಿಷಬ್ ಶೆಟ್ಟಿಯ ‘ಶಿವಮ್ಮ’ ಸಿನಿಮಾ ವಿಶ್ವದ ಹಲವು ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಸಿನಿಮಾ ಹಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿದೆ, ಕೆಲವು ಚಲನಚಿತ್ರೋತ್ಸಗಳಲ್ಲಿ ಪ್ರಶಸ್ತಿಯನ್ನೂ ಗೆದ್ದಿದೆ. ಇದೀಗ ಭಾರತದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

‘ಶಿವಮ್ಮ’ ಸಿನಿಮಾವು ಸರ್ಕಾರಿ ಶಾಲೆಯಲ್ಲಿ ಬಿಸಿಊಟ ಅಡುಗೆ ಮಾಡುವ ಮಹಿಳೆಯೊಬ್ಬಾಕೆ ಹೆಲ್ತ್​ ಪ್ರಾಡೆಕ್ಟ್ ಸೇಲ್ ಮಾಡುವ ನೆಟ್​ವರ್ಕಿಂಗ್ ಸಂಸ್ಥೆಯ ಏಜೆಂಟ್ ಆಗುವ ಕತೆ. ಸಿನಿಮಾದಲ್ಲಿ ನಟಿಸಿರುವ ಬಹುತೇಕರು ನಟನೆಯ ಹಿನ್ನೆಲೆ ಇರುವವರಲ್ಲ, ಬದಲಿಗೆ ಒಂದು ಹಳ್ಳಿಯ ಜನರೇ ಸಿನಿಮಾದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಕೊಪ್ಪಳ ಜಿಲ್ಲೆಯ ಬಳಿ ಇರುವ ಯರೆಹೆಂಚಿನಾಳ್ ಹೆಸರಿನ ಹಳ್ಳಿಯೊಂದರಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸಿನಿಮಾವನ್ನು ಜೈಶಂಕರ್ ಆರ್ಯರ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನಟ, ನಿರ್ದೇಶಕ ರಿಷಬ್ ಶೆಟ್ಟಿ. ಸಿನಿಮಾವು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅತ್ಯಂತ ಮೆಚ್ಚುಗೆ ಪಡೆದ ರಿಷಬ್ ಶೆಟ್ಟಿ ಸಂಸ್ಥೆಯ ಹೆಮ್ಮೆಯ ಚಲನಚಿತ್ರ, “ಶಿವಮ್ಮ,” ಬುಸಾನ್ ಚಲನಚಿತ್ರೋತ್ಸವ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಪ್ರತಿಷ್ಠಿತ ಚಲನಚಿತ್ರೋತ್ಸವಗಳ ಮೂಲಕ ಒಂದು ವರ್ಷದ ಪ್ರಯಾಣದ ನಂತರ ಅಂತಿಮವಾಗಿ ಭಾರತಕ್ಕೆ ಆಗಮಿಸಲಿದೆ. ಇರಾನ್‌ನಲ್ಲಿ ನಡೆದ ಫಜರ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಯನ್ನು ಈ ಸಿನಿಮಾ ಪಡೆದಿದೆ.

ಸಿನಿಮಾದ ಟ್ರೈಲರ್ ಅಕ್ಟೋಬರ್ 10ರಂದು ರಿಷಬ್ ಶೆಟ್ಟಿ ಫಿಲಮ್ಸ್ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಿದೆ. ಸಿನಿಮಾವನ್ನು ನೈಜತೆಗೆ ಅತಿ ಹೆಚ್ಚು ಹತ್ತಿರವಾಗಿದೆ.

LEAVE A REPLY

Please enter your comment!
Please enter your name here