ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್

By: Ommnews

Date:

Share post:

ನವದೆಹಲಿ: ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತವಾಗಿದ್ದಾರೆ. ಭಾರತೀಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸರ್ಕಾರದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

Advertisement
Advertisement
Advertisement

ಟೆಲ್ ಅವೀವ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತೀಯರ ಮನವಿಗಳನ್ನು ಸಂಗ್ರಹಿಸಲಾಗಿದೆ. ಯುದ್ಧದಲ್ಲಿ ಸಿಲುಕಿರುವ ಪ್ರವಾಸಿಗರು ಸೇರಿದಂತೆ ಭಾರತೀಯ ಪ್ರಜೆಗಳು ತಮ್ಮ ಸುರಕ್ಷಿತ ನಿರ್ಗಮನಕ್ಕೆ ಅನುಕೂಲವಾಗುವಂತೆ ಮನವಿ ಮಾಡುತ್ತಿದ್ದಾರೆ.

ಇಸ್ರೇಲ್‍ನಲ್ಲಿ ವಾಸಿಸುವ ಹಲವಾರು ಭಾರತೀಯರು ಆರೈಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು, ಹಲವಾರು ಐಟಿ ವೃತ್ತಿಪರರು ಮತ್ತು ವಜ್ರದ ವ್ಯಾಪಾರಿಗಳು ಇದ್ದಾರೆ. ಇಸ್ರೇಲ್‍ಗೆ ಭೇಟಿ ನೀಡುವ ಕೆಲವು ಉದ್ಯಮಿಗಳು ಸಂಘರ್ಷದಲ್ಲಿ ಸಿಲುಕಿಕೊಂಡಿದ್ದಾರೆ. ಶೀಘ್ರದಲ್ಲೇ ಸ್ಥಳಾಂತರಿಸಲು ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.

Share post:

LEAVE A REPLY

Please enter your comment!
Please enter your name here