ಸನಾತನ ಧರ್ಮವನ್ನು ರಕ್ಷಿಸಲು ‘ನಾನು ಸನಾತನ ಧರ್ಮರಕ್ಷಕ’ ಅಭಿಯಾನ ನಡೆಸುವೆವು -ಶ್ರೀ.ರಮೇಶ ಶಿಂದೆ

By: Ommnews

Date:

Share post:

ಸನಾತನ ಧರ್ಮವನ್ನು ಮುಗಿಸುತ್ತೇವೆಂದು ‘ಹೇಟ್ ಸ್ಪೀಚ್’ ಮಾಡುವವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ?

Advertisement
Advertisement
Advertisement

ಭಾರತದಲ್ಲಿ ಸಂವಿಧಾನ, ಕಾನೂನು ಅಸ್ತಿತ್ವದಲ್ಲಿದ್ದರೂ ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆಯಂತಹ ಸಚಿವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಎಚ್.ಐ.ವಿ. ಈ ರೋಗಗಳೊಂದಿಗೆ ತುಲನೆ ಮಾಡಿ ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ಅತಿರೇಕದ ಮತ್ತು ಅರ್ಬನ್ ನಕ್ಸಲೀಯರಂತೆ ಮಾತನಾಡುತ್ತಿದ್ದಾರೆ. ಇದಾಗ್ಯೂ ಪ್ರಗತಿಪರ ಪತ್ರಕರ್ತರು ಎಂದು ಹೇಳಿಕೊಳ್ಳುವ ಮಹಾರಾಷ್ಟ್ರದ ನಿಖಿಲ್ ವಾಗಳೆ, ರಾಷ್ಟ್ರವಾದಿ ಕಾಂಗ್ರೆಸ್ ನ ಜಿತೇಂದ್ರ ಅವ್ಹಾಡ್ ಇವರೂ ಕೂಡ ಸನಾತನ ಧರ್ಮವನ್ನು ಮುಗಿಸುವ ನಿಲುವಿಗೆ ಬೆಂಬಲ ಘೋಷಿಸುವ ಮೂಲಕ ‘ಸನಾತನ ಧರ್ಮ ದೇಶಕ್ಕೆ ತಗಲಿರುವ ಪಿಡುಗು.’ ಎಂಬಂತಹ ವಿಷಕಾರಿ ಟೀಕೆ ಮಾಡುತ್ತಾರೆ.

ಮತ್ತೊಂದೆಡೆ ಸರ್ವೋಚ್ಚ ನ್ಯಾಯಾಲಯವು ಏಪ್ರಿಲ್ 28, 2023 ರಂದು ನೀಡಿದ ಆದೇಶದಲ್ಲಿ, ಯಾರಾದರು ‘ಹೇಟ್ ಸ್ಪೀಚ್’ ಮಾಡಿ ಯಾವುದೇ ಸಮುದಾಯದ ಭಾವನೆಗಳನ್ನು ನೋಯಿಸಲು ಪ್ರಯತ್ನಿಸಿದರೆ, ಸರಕಾರವು ಯಾರಾದರೂ ದೂರು ನೀಡಲಿ ಎಂದು ಕಾಯದೇ ಸ್ವತಃ ಮಧ್ಯ ಪ್ರವೇಶಿಸಿ ಪ್ರಾಥಮಿಕ ದೂರು (ಎಫ್‌ಐಆರ್) ದಾಖಲಿಸಬೇಕು ಎಂದು ಸ್ಪಷ್ಟಪಡಿಸಿದೆ. ಸರಕಾರ ಇದರಲ್ಲಿ ವಿಳಂಬ ಮಾಡಿದರೆ, ಮಾ. ಸರ್ವೋಚ್ಚ ನ್ಯಾಯಾಲಯದ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.

ಇಷ್ಟು ಸ್ಪಷ್ಟ ಆದೇಶವಿದ್ದರೂ 100 ಕೋಟಿ ಸಮಾಜ ಇರುವ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡುವವರ ಮೇಲೆ ಏಕೆ ದೂರು ದಾಖಲಿಸಿಲ್ಲ ? ಅದಕ್ಕಾಗಿಯೇ ಸನಾತನ ಧರ್ಮದ ರಕ್ಷಣೆಗಾಗಿ ಮತ್ತು ಸನಾತನ ಧರ್ಮವನ್ನು ನಾಶಪಡಿಸುವ ಬಗ್ಗೆ ‘ಹೇಟ್ ಸ್ಪೀಚ್’ ಮಾಡುವವರ ವಿರುದ್ಧ ‘ನಾನು ಸನಾತನ ಧರ್ಮರಕ್ಷಕ’ ಅಭಿಯಾನವನ್ನು ಎಲ್ಲೆಡೆ ಹಮ್ಮಿಕೊಳ್ಳಲಾಗುವುದು. ಇದರಡಿಯಲ್ಲಿ ಸನಾತನ ಧರ್ಮದವರಲ್ಲಿ ಜಾಗೃತಿ ಮೂಡಿಸುವ ವ್ಯಾಖ್ಯಾನಗಳು-ಸಭೆಗಳು ಹಾಗೂ ‘ಹೇಟ್ ಸ್ಪೀಚ್’ ಮಾಡುವವರ ವಿರುದ್ಧ ದೂರು ದಾಖಲಿಸುವ ಕೃತಿಗಳನ್ನು ಮಾಡಲಾಗುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಮಾಹಿತಿ ನೀಡಿದರು.

ಸಹಿಷ್ಣುತೆ, ಸಹೋದರತ್ವ ಮತ್ತು ವಿಶ್ವಕಲ್ಯಾಣಕ್ಕೆ ಹೆಸರಾದ ಸನಾತನ ಧರ್ಮವನ್ನು ನಾಶಪಡಿಸಲು ಅರ್ಬನ್ ನಕ್ಸಲೀಯರ ಷಡ್ಯಂತ್ರಗಳು ನಿರಂತರವಾಗಿ ನಡೆಯುತ್ತಿವೆ. ಮೊದಲು ಜೆ.ಎನ್.ಯು.ನಲ್ಲಿ ‘ಭಾರತ್ ತೇರೆ ತುಕ್ಡೆ ಹೊಂಗೆ’ ಎಂಬ ದೇಶವಿರೋಧಿ ಘೋಷಣೆಗಳನ್ನು ಕೂಗಲಾಯಿತು. ಅದಾದ ನಂತರ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಎಂಬ ಹೆಸರಿನಲ್ಲಿ ಹಿಂದುತ್ವವನ್ನು ಮುಗಿಸುವ ಪರಿಷದ್ ಗಳು ನಡೆದವು. ಆ ಸಮಯದಲ್ಲಿ ವಿರೋಧದ ನಂತರ, ‘ನಾವು ಹಿಂದೂ ಧರ್ಮದ ವಿರುದ್ಧ ಅಲ್ಲ, ಬದಲಾಗಿ ರಾಜಕೀಯ ಹಿಂದುತ್ವದ ವಿರುದ್ಧವಾಗಿದ್ದೇವೆ’ ಎಂದು ವಾದಿಸಿದರು.

ಆದರೆ ಈಗ ‘ಸನಾತನ ಧರ್ಮ’ವನ್ನು ಕೊನೆಗಾಣಿಸುವ ಮಾತು ಕೇಳಿ ಬರುತ್ತಿದೆ. 100 ಕೋಟಿ ಹಿಂದೂಗಳನ್ನು ಕೊಲ್ಲುವ ಓವೈಸಿಯ ಮಾತಿಗಿಂತ ಇದು ಭಿನ್ನವಾಗಿಲ್ಲ ? ‘ಹೇಟ್ ಸ್ಪೀಚ್’ನ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯದ ಪ್ರತಿಜ್ಞಾಪತ್ರದಲ್ಲಿ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು 30 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಲಾಗಿದೆ. ಅದರಲ್ಲಿ ಹೆಚ್ಚಿನ ದೂರುಗಳು ಸಮಸ್ತ ಹಿಂದೂಗಳ ‘ಹಿಂದೂ ಜನಾಕ್ರೋಶ ಮೋರ್ಚಾ’ದಲ್ಲಿನ ಹಿಂದುತ್ವವಾದಿ ವಕ್ತಾರರ ವಿರುದ್ಧ ದಾಖಲಿಸಲಾಗಿದೆ.

ಈ ದೂರು ದಾಖಲಿಸುವ ಹಿಂದೆ ಅರ್ಬನ್ ನಕ್ಸಲಿಯರ ಜೊತೆ ನಂಟಿರುವ ಎಡಪಂಥೀಯ ಚಿಂತಕಿ ತೀಸ್ತಾ ಸೆಟಲ್ವಾಡ್ ಅವರ ಸಂಘಟನೆಯಾದ ‘ಸಿಟಿಝನ್ ಫಾರ್ ಜಸ್ಟೀಸ್ ಆಂಡ್ ಪೀಸ್’ ನ ಕೈವಾಡ ಇದೆ; ಆದರೆ ಈ ಇದೇ ಸಂಘಟನೆ ಸ್ಟಾಲಿನ್, ಪ್ರಿಯಾಂಕ್ ಖರ್ಗೆ, ನಿಖಿಲ್ ವಾಗಳೆ, ಆವ್ಹಾಡ್ ಮೊದಲಾದವರ ವಿರುದ್ಧ ಒಂದೇ ಒಂದು ‘ಹೇಟ್ ಸ್ಪೀಚ್’ನ ದೂರು ದಾಖಲಿಸಿಲ್ಲ. ಆದ್ದರಿಂದ, ಇದು ಒಟ್ಟಾರೆ ಸನಾತನ ಧರ್ಮವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಎಡಪಂಥೀಯ ಅರ್ಬನ್ ನಕ್ಸಲೀಯರ ಪಿತೂರಿ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಈ ಸಂಚುಕೋರರ ವಿರುದ್ಧ ದೂರು ದಾಖಲಿಸುವುದರ ಜೊತೆಗೆ ‘ಎನ್‌ಐಎ’ ಕಡೆಯಿಂದ ತನಿಖೆ ನಡೆಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುತ್ತದೆ.

ಸನಾತನ ಧರ್ಮದ ವಿರುದ್ಧ ಈ ಅರ್ಬನ್ ನಕ್ಸಲೀಯರ ಷಡ್ಯಂತ್ರವನ್ನು ಬಯಲಿಗೆಳೆಯಲು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಲು ಸಮಿತಿಯ ವತಿಯಿಂದ ಎಲ್ಲೆಡೆ ‘ನಾನು ಸನಾತನ ಧರ್ಮರಕ್ಷಕ’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಜೊತೆಗೆ ಸನಾತನ ಧರ್ಮದ ಮಹತ್ವದ ಕುರಿತು ವ್ಯಾಖ್ಯಾನಗಳನ್ನು ತೆಗೆಕೊಳ್ಳಲಾಗುವುದು ಎಂದೂ ಶ್ರೀ. ಶಿಂದೆಯವರು ಹೇಳಿದರು.

ನಿಮ್ಮ ವಿನಮ್ರ, ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಸಂಪರ್ಕ : 9987966666

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section