ಏಶಿಯನ್ ಗೇಮ್ಸ್ : ಮಳೆಯಿಂದಾಗಿ ಫೈನಲ್​ ಪಂದ್ಯ ರದ್ದು: ಟೀಮ್ ಇಂಡಿಯಾಗೆ ಚಿನ್ನದ ಪದಕ

By: Ommnews

Date:

Share post:

ಹ್ಯಾಂಗ್‌ಝೌ: ಭಾರತ – ಅಫ್ಘಾನಿಸ್ತಾನ್ ನಡುವಣ ಏಷ್ಯನ್ ಗೇಮ್ಸ್​ ಕ್ರಿಕೆಟ್​ ಫೈನಲ್​ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಟೂರ್ನಿಯುದ್ದಕೂ ಉತ್ತಮ ಪ್ರದರ್ಶನದೊಂದಿಗೆ ಫೈನಲ್​ಗೆ ಪ್ರವೇಶಿಸಿದ ಟೀಮ್ ಇಂಡಿಯಾಗೆ ಚಿನ್ನದ ಪದಕ ಒಲಿದಿದೆ. ಇನ್ನು ಅಫ್ಘಾನಿಸ್ತಾನ್ ಬೆಳ್ಳಿ ಪದಕ ಗೆದ್ದರೆ, ಬಾಂಗ್ಲಾದೇಶ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

Advertisement
Advertisement
Advertisement

ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ 18.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್​ ಕಲೆಹಾಕಿದಾಗ ಮಳೆ ಬರಲಾರಂಭಿಸಿತು.

ಧಾರಾಕಾರ ಸುರಿದ ಮಳೆಯಿಂದ ಮೈದಾನವು ಸಂಪೂರ್ಣ ಒದ್ದೆಯಾಗಿದ್ದು, ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್​ಗಳು ನಿರ್ಧರಿಸಿದರು. ಅದರಂತೆ ಅಂತಿಮ ಹಣಾಹಣಿಯು ಮಳೆಗೆ ಅಹುತಿಯಾಯಿತು. ಇದಾಗ್ಯೂ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಟೀಮ್ ಇಂಡಿಯಾವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ಮೂಲಕ ಏಷ್ಯನ್ ಗೇಮ್ಸ್​ ಕ್ರಿಕೆಟ್​ನಲ್ಲಿ ಭಾರತ ತಂಡವು ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ. ಇನ್ನು ರನ್ನರ್ ಅಪ್ ತಂಡ ಅಫ್ಘಾನಿಸ್ತಾನ್ ತಂಡವು ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section