ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಲು ಪ್ರತಿ ಕ್ಷಣವೂ ಪ್ರಪಂಚದಲ್ಲಿ ತುಂಬಾ ಮಂದಿ ಪ್ರಯತ್ನಿಸುತ್ತಿರುತ್ತಾರೆ. ಆದರೆ ಅದರಲ್ಲಿ ಜಯಮಾಲೆ ಕೆಲವು ಮಂದಿಗಷ್ಟೇ ಪ್ರಾಪ್ತಿಯಾಗುತ್ತದೆ.
ಕೋಲ್ಕೊತ್ತಾದ 15 ವರ್ಷದ ಬಾಲಕ ಪ್ಲೇಯಿಂಗ್ ಕಾರ್ಡ್ಸ್ ಬಳಸಿ ಗಿನ್ನಿಸ್ ದಾಖಲೆ ಸಾಧಿಸಿದ್ದಾನೆ.
ಆರ್ನಬ್ ಟೈಂ ಪಾಸ್ ಗಾಗಿ ಪ್ಲೇಯಿಂಗ್ ಕಾರ್ಡ್ಸ್ ಆಡದೆ ಅದರಿಂದ ನಿರ್ದಿಷ್ಟವಾದ ರಚನೆಗಳನ್ನು ನಿರ್ಮಿಸಿದ್ದಾನೆ. ಆತ ಪ್ಲೇಯಿಂಗ್ ಕಾರ್ಡ್ಸ್ ಬಳಸಿ ರಚಿಸಿರುವ ಚಿಕ್ಕ ಚಿಕ್ಕ ಕಟ್ಟಡಗಳನ್ನು ಕಂಡು ಗಿನ್ನಿಸ್ ಸಂಸ್ಥೆ ತಲೆದೂಗಿದೆ.
ಆರ್ನಬ್ ನಾಲ್ಕು ರೀತಿಯ ಕಟ್ಟಡ ನಿರ್ಮಾಣಗಳನ್ನು ಪ್ಲೇಯಿಂಗ್ ಕಾರ್ಡ್ಸ್‌ನಿಂದ ತಯಾರಿಸಿದ್ದಾನೆ. 41 ದಿನಗಳ ಸಮಯದಲ್ಲಿ ಈ ಕಟ್ಟಡ ನಿರ್ಮಾಣಗಳನ್ನು ತಯಾರಿಸಿದ್ದಾನೆ. ಆತ ರಚಿಸಿರುವ ನಾನಾ ವಿನ್ಯಾಸದ ಕಟ್ಟಡಗಳ ಪೈಕಿ ಒಂದು 11 ಅಡಿ ಉದ್ದ, ನಾಲ್ಕು ಅಂಗುಲ ಎತ್ತರ, 16 ಅಡಿಗಳು, 8 ಅಂಗುಲ ಅಳತೆಯೊಂದಿಗೆ ಅತಿ ದೊಡ್ಡ ಪ್ಲೇಯಿಂಗ್ ಕಾರ್ಡ್ ರಚನೆ ವಿನ್ಯಾಸ ಮಾಡಿದ್ದಾನೆ. ಇದು ವಿಶ್ವ ದಾಖಲೆಯನ್ನು ಸಾಧಿಸಿದೆ.
ಈ ಹಿಂದೆ ಬೈಗಾನ್ ಬರ್ಗ್ ಎಂಬಾತ ರಚಿಸಿದ್ದ ರೆಕಾರ್ಡ್ ಅನ್ನು ಆರ್ನಬ್ ಕೆಡವಿದ್ದಾನೆ. ರೈಟರ್ಸ್ ಬಿಲ್ಡಿಂಗ್, ಶಹೀದ್ ಮಿನಾರ್, ಸಾಲ್ಟ್ ಲೇಕ್ ಕ್ರೀಡಾಂಗಣ, ಸೇಂಟ್ ಪಾಲ್ಸ್ ಕೇಥಡ್ರಲ್ ಮುಂತಾದ ಪ್ರತಿ ರೂಪಗಳನ್ನು ನಿರ್ಮಿಸಲು ಅರ್ನವ್ 1,43,000 ಕಾರ್ಡ್‌ಗಳನ್ನು ಬಳಸಿದ್ದಾನೆ.
ಈ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಬಾಲಕ ಅರ್ನಬ್ ವರ್ಲ್ಡ್ ರೆಕಾರ್ಡ್ ಸಾಧನೆ ಆಗಿರುವುದಕ್ಕೆ ತುಂಬಾ ಖುಷಿ ಅನಿಸಿತು. ಪೋಷಕರು ಕೂಡ ತುಂಬಾ ಹೆಮ್ಮೆ ಪಡುತ್ತಿದ್ದಾರೆ. ಕೋಲ್ಕೊತ್ತಾದ ಐತಿಹಾಸಿಕ ಕಟ್ಟಡಗಳ ಪ್ರತಿರೂಪಗಳನ್ನು ರಚಿಸುವಾಗ ಮಧ್ಯದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದೇನೆ. ಆದರೆ ನಾನು ನಿರಾಶೆ ಪಡದೆ ಮತ್ತೆ ಮತ್ತೆ ಕೆಲಸ ಮಾಡಿ ಪೂರ್ಣಗೊಳಿಸಿದೆ ಎಂದು ಅರ್ನಬ್ ಹೇಳಿದ್ದಾನೆ.