ಮಂಗಳೂರು: ಮಂಗಳೂರಿನ ವಿಮಾನ ನಿಲ್ದಾಣದ ಪೂರ್ಣ ಆಡಳಿತವು ಅ. 31ರ ಅನಂತರ ಅದಾನಿ ಸಮೂಹದ ಪಾಲಾಗಲಿದೆ.
2020ರ ಅ. 31ರಂದು ಮಂಗಳೂರು ಸೇರಿದಂತೆ ದೇಶದ 6 ವಿಮಾನ ನಿಲ್ದಾಣಗಳ ಆಡಳಿತವನ್ನು ಅದಾನಿ ಸಂಸ್ಥೆ ತನ್ನ ವಶಕ್ಕೆ ಪಡೆದುಕೊಂಡಿತ್ತು. ಆಗಿನ ಒಪ್ಪಂದ ಪ್ರಕಾರ ಮೂರು ವರ್ಷಗಳವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅರ್ಧದಷ್ಟು ಸಿಬಂದಿ ಹಾಗೂ ಅದಾನಿ ಸಿಬಂದಿ ಜತೆಯಾಗಿಯೇ ಕೆಲಸ ಮಾಡಬೇಕಿತ್ತು.
ಈ ಒಪ್ಪಂದದ ಅವಧಿ ಅ.30ಕ್ಕೆ ಮುಕ್ತಾಯಗೊಳ್ಳುತ್ತಿದೆ. ಆ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಅದಾನಿ ಪಾಲಾಗಲಿದೆ.
ಈ ಕಾರಣದಿಂದ ವಿಮಾನ ನಿಲ್ದಾಣದ ಹಣಕಾಸು, ಎಚ್‌ಆರ್, ಆಡಳಿತ, ವಾಣಿಜ್ಯ, ಅಗ್ನಿಶಾಮಕ, ಟರ್ಮಿನಲ್ ವಿಭಾಗ ಅ. 31ರ ಬಳಿಕ ಅದಾನಿ ಆಡಳಿತಕ್ಕೆ ಒಳಪಡಲಿದೆ. ಮುಂದೆ, ಏರ್‌ಟ್ರಾಫಿಕ್ ಕಂಟ್ರೋಲ್ (ಎಟಿಸಿ), ಕಾರ್ಗೊ ಹಾಗೂ ಸಿಎನ್‌ಎಸ್(ಕಮ್ಯುನಿಕೇಶನ್ ನೇವಿಗೇಶನ್ ಆಯಂಡ್ ಸರ್ವೆಲೆನ್ಸ್) ಮಾತ್ರ ಎಎಐ ನಿರ್ವಹಿಸಲಿದೆ.