ಪುತ್ತೂರು : ರೋಟರಿ ಇಲೈಟ್ ಪುತ್ತೂರು ಇದರ ಆಶ್ರಯದಲ್ಲಿ ರೋಟರಿ ಪುತ್ತೂರು ಸಿಟಿ ಇದರ ಸಹಯೋಗದೊಂದಿಗೆ ಜಿಲ್ಲಾ ಯೋಜನೆ” ಅಂಗನವಾಡಿ” ಪುನಶ್ಚೇತನ ಇದರ ಅಂಗವಾಗಿ ದಿ.6/10/23 ರಂದು ಪುತ್ತೂರು ನಗರ ವ್ಯಾಪ್ತಿಯ ಹಾರಾಡಿ ಅಂಗನವಾಡಿ ಕೇಂದ್ರ ಚೆಲುವಮ್ಮನಕಟ್ಟೆ ಅಂಗನವಾಡಿ ಕೇಂದ್ರ ಹಾಗೂ ಬನ್ನೂರು ಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸುಮಾರು ನೂರಕ್ಕಿಂತ ಅಧಿಕ ಮಕ್ಕಳ ದಂತ ತಪಾಸಣಾ ಶಿಬಿರ ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ತಜ್ಞವೈದ್ಯರಾಗಿ ರೋಟರಿ ಪುತ್ತೂರು ಇಲೈಟ್ ಇದರ ಸದಸ್ಯರು ಆದ ರೊ| ಡಾಕ್ಟರ್ ಕೀರ್ತನ್ ಕಜೆ ಖ್ಯಾತಮಕ್ಕಳ ದಂತ ತಜ್ಞವೈದ್ಯರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಜಿ ರೊ. ಲಾರೆನ್ಸ್ ಗೊನ್ಸಾಲಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ರೋಟರಿ ಪುತ್ತೂರು ಸಿಟಿ ಇದರ ಅಧ್ಯಕ್ಷ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿದರು. ರೋಟರಿ ಇಲೈಟ್ ಅಧ್ಯಕ್ಷ ರೊ.ರಝಾಕ್ ಕಬಕಕಾರ್ಸ ರವರು ಉಪಸ್ಥಿತರಿದ್ದರು. ರೊ.ಆಸ್ಕರ್ ಆನಂದ್ ಕಾರ್ಯಕ್ರಮ ನಿರೂಪಿಸಿದರು.