ಕರಾವಳಿ

ಅ.15ರಿಂದ ಅ.24ರವರೆಗೆ ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ

ಮಂಗಳೂರು: ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ಅ.15ರಿಂದ ಅ.24ರವರೆಗೆ ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿಗಳೊಂದಿಗೆ ನಡೆಯಲಿದೆ.

Advertisement
Advertisement
Advertisement

ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಅ.15ರಂದು ಬೆಳಿಗ್ಗೆ 8ಕ್ಕೆ ಶುದ್ಧಹೋಮ, 10 ಗಂಟೆಗೆ ಕೆಳಗಿನ ಮನೆ ತರವಾಡಿನಿಂದ ಕ್ಷೀರಕುಂಭ ಆಗಮನ, ಹೊಸ ಭತ್ತದ ತೆನೆ ವಿತರಣೆ, ರಾತ್ರಿ 7ಕ್ಕೆ ನವರಾತ್ರಿಯ ಪ್ರಥಮ ದಿನದ ಮಹಾಪೂಜೆ ಹೋಬಳಿಯವರಿಂದ ನಡೆಯಲಿದೆ.

ಅ.16ರಂದು ರಾತ್ರಿ 7ಕ್ಕೆ ಕೊಡಿಯಾಲ್‌ಬೈಲ್ ಗ್ರಾಮ ಸಂಘದಿಂದ ದ್ವಿತೀಯ ದಿನದ ಮಹಾಪೂಜೆ, ಅ.17ರಂದು ರಾತ್ರಿ 7ಕ್ಕೆ ಕದ್ರಿ ಗ್ರಾಮದವರಿಂದ ಮಹಾಪೂಜೆ, ಅ.18ರಂದು ರಾತ್ರಿ 7ಕ್ಕೆ ಜಪ್ಪು, ಕಂಕನಾಡಿ, ಸಜಿಪ ಗ್ರಾಮದವರಿಂದ ಮಹಾಪೂಜೆ ನಡೆಯಲಿದೆ.

ಅ.19ರಂದು ರಾತ್ರಿ 7ಕ್ಕೆ ಇರಾ ಕಲ್ಲಾಡಿ ಗ್ರಾಮದವರಿಂದ, ಅ.20ರಂದು ರಾತ್ರಿ 7ಕ್ಕೆ ಚೇಳೂರು ಹಾಗೂ ಪಜೀರು ಗ್ರಾಮದವರಿಂದ, ಅ.21ರಂದು ರಾತ್ರಿ 7ಕ್ಕೆ ಬೋಳಾರ ಗ್ರಾಮದವರಿಂದ ಮಹಾಪೂಜೆ, ರಾತ್ರಿ 9ರಿಂದ ಬಲಿ ಉತ್ಸವ, ಪಲ್ಲಕ್ಕಿ ಸೇವೆ, ಬಿಂಬ ದರ್ಶನ, ಪ್ರಸಾದ ವಿತರಣೆ ನಡೆಯಲಿದೆ.ಅ.22ರಂದು ಮಧ್ಯಾಹ್ನ 12ಕ್ಕೆ ಯುವಜನ ಸೇವಾ ಸಮಿತಿ ಹಾಗೂ ಮಹಿಳಾ ಸೇವಾ ಸಮಿತಿ ವತಿಯಿಂದ ಕುಂಕುಮಾರ್ಚನೆ ಸೇವೆ, ರಾತ್ರಿ 7ಕ್ಕೆ ನೀರುಮಾರ್ಗ, ಪಡುಬೊಂಡಂತಿಲ, ನೆತ್ರೆಕೆರೆ, ಬೆಳ್ಳೂರು ಗ್ರಾಮದವರಿಂದ ಮಹಾಪೂಜೆ, ಅ.23ರಂದು ರಾತ್ರಿ 7ಕ್ಕೆ ಆಯುಧ ಪೂಜೆ, ಅ.24ರಂದು ಮಧ್ಯಾಹ್ನ 12.30ಕ್ಕೆ ವಿಜಯ ದಶಮಿ ಮಹಾಪೂಜೆ ನಡೆಯಲಿದೆ.

ನವರಾತ್ರಿಯ ವೇಳೆ ಪ್ರತಿ ದಿನ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಲಿದೆ. ಕ್ಷೇತ್ರದ ಆಚಾರಪಟ್ಟವರು ಹಾಗೂ ಗುರಿಕಾರರ ಉಪಸ್ಥಿತಿಯಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago