ಮಂಗಳೂರು: ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ಅ.15ರಿಂದ ಅ.24ರವರೆಗೆ ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿಗಳೊಂದಿಗೆ ನಡೆಯಲಿದೆ.
ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಅ.15ರಂದು ಬೆಳಿಗ್ಗೆ 8ಕ್ಕೆ ಶುದ್ಧಹೋಮ, 10 ಗಂಟೆಗೆ ಕೆಳಗಿನ ಮನೆ ತರವಾಡಿನಿಂದ ಕ್ಷೀರಕುಂಭ ಆಗಮನ, ಹೊಸ ಭತ್ತದ ತೆನೆ ವಿತರಣೆ, ರಾತ್ರಿ 7ಕ್ಕೆ ನವರಾತ್ರಿಯ ಪ್ರಥಮ ದಿನದ ಮಹಾಪೂಜೆ ಹೋಬಳಿಯವರಿಂದ ನಡೆಯಲಿದೆ.
ಅ.16ರಂದು ರಾತ್ರಿ 7ಕ್ಕೆ ಕೊಡಿಯಾಲ್‌ಬೈಲ್ ಗ್ರಾಮ ಸಂಘದಿಂದ ದ್ವಿತೀಯ ದಿನದ ಮಹಾಪೂಜೆ, ಅ.17ರಂದು ರಾತ್ರಿ 7ಕ್ಕೆ ಕದ್ರಿ ಗ್ರಾಮದವರಿಂದ ಮಹಾಪೂಜೆ, ಅ.18ರಂದು ರಾತ್ರಿ 7ಕ್ಕೆ ಜಪ್ಪು, ಕಂಕನಾಡಿ, ಸಜಿಪ ಗ್ರಾಮದವರಿಂದ ಮಹಾಪೂಜೆ ನಡೆಯಲಿದೆ.
ಅ.19ರಂದು ರಾತ್ರಿ 7ಕ್ಕೆ ಇರಾ ಕಲ್ಲಾಡಿ ಗ್ರಾಮದವರಿಂದ, ಅ.20ರಂದು ರಾತ್ರಿ 7ಕ್ಕೆ ಚೇಳೂರು ಹಾಗೂ ಪಜೀರು ಗ್ರಾಮದವರಿಂದ, ಅ.21ರಂದು ರಾತ್ರಿ 7ಕ್ಕೆ ಬೋಳಾರ ಗ್ರಾಮದವರಿಂದ ಮಹಾಪೂಜೆ, ರಾತ್ರಿ 9ರಿಂದ ಬಲಿ ಉತ್ಸವ, ಪಲ್ಲಕ್ಕಿ ಸೇವೆ, ಬಿಂಬ ದರ್ಶನ, ಪ್ರಸಾದ ವಿತರಣೆ ನಡೆಯಲಿದೆ.ಅ.22ರಂದು ಮಧ್ಯಾಹ್ನ 12ಕ್ಕೆ ಯುವಜನ ಸೇವಾ ಸಮಿತಿ ಹಾಗೂ ಮಹಿಳಾ ಸೇವಾ ಸಮಿತಿ ವತಿಯಿಂದ ಕುಂಕುಮಾರ್ಚನೆ ಸೇವೆ, ರಾತ್ರಿ 7ಕ್ಕೆ ನೀರುಮಾರ್ಗ, ಪಡುಬೊಂಡಂತಿಲ, ನೆತ್ರೆಕೆರೆ, ಬೆಳ್ಳೂರು ಗ್ರಾಮದವರಿಂದ ಮಹಾಪೂಜೆ, ಅ.23ರಂದು ರಾತ್ರಿ 7ಕ್ಕೆ ಆಯುಧ ಪೂಜೆ, ಅ.24ರಂದು ಮಧ್ಯಾಹ್ನ 12.30ಕ್ಕೆ ವಿಜಯ ದಶಮಿ ಮಹಾಪೂಜೆ ನಡೆಯಲಿದೆ.
ನವರಾತ್ರಿಯ ವೇಳೆ ಪ್ರತಿ ದಿನ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಲಿದೆ. ಕ್ಷೇತ್ರದ ಆಚಾರಪಟ್ಟವರು ಹಾಗೂ ಗುರಿಕಾರರ ಉಪಸ್ಥಿತಿಯಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.