ನೊಂದ ಕುಟುಂಬಕ್ಕೆ ನೆರವಾದ ಅಂಚೆ ಅಪಘಾತ ವಿಮೆ: 399 ರೂ ಕಟ್ಟಿದ್ದಕ್ಕೆ 10 ಲಕ್ಷ ರೂ ಪರಿಹಾರ

By: Ommnews

Date:

Share post:

ಮಂಡ್ಯ: ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ಅಂಚೆ ಇಲಾಖೆ ಅಪಘಾತ ವಿಮೆ ನೆರವಿಗೆ ಬಂದಿದೆ. ಅದರಂತೆ 399 ರೂ ಪಾವತಿಸಿ ಪಾಲಿಸಿ ಪಡೆದಿದ್ದ ಹಿನ್ನೆಲೆಯಲ್ಲಿ ಆ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಸಿಕ್ಕಿದೆ.

Advertisement
Advertisement
Advertisement

ಮಳವಳ್ಳಿ ತಾಲೂಕು ಬಾಚೇನಹಳ್ಳಿ ಗ್ರಾಮದ ರೈತ ಮಹಿಳೆ ಪುಟ್ಟಮ್ಮ ಎಂಬುವರಿಗೆ ವಿಮೆ ಪರಿಹಾರದ ನೆರವು ದೊರೆಕಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಸಹಕಾರಿಯಾಗಿದೆ. ಮಾತ್ರವಲ್ಲದೆ ಅಂಚೆ ಇಲಾಖೆಯ ಅಪಘಾತ ವಿಮೆಯ ಮಹತ್ವ ಎಷ್ಟಿದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ.

ಏನಿದು ಪ್ರಕರಣ?

ಬಾಚೇನಹಳ್ಳಿ ಗ್ರಾಮದ ಬಸವರಾಜು 2022 ಅಕ್ಟೋಬರ್‌ನಲ್ಲಿ ಅಂಚೆ ಇಲಾಖೆಯಲ್ಲಿ ಟಾಟಾ ಕಂಪನಿಯ ಅಪಘಾತ ವಿಮೆ ಪಾಲಿಸಿ ಪಡೆದುಕೊಂಡಿದ್ದರು. ಆದರೆ ದುರಾದೃಷ್ಟವಶಾತ್ 2023 ಮಾರ್ಚ್‌ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದಾಗಿ ಕುಟುಂಬದ ಆಧಾರಸ್ತಂಭವೇ ಇಲ್ಲದಂತಾಗಿತ್ತು. ಇನ್ನು ಬಸವರಾಜುವಿಮೆ ಮಾಡಿಸಿರುವ ಬಗ್ಗೆ ಕುಟುಂಬದವರಿಗೆ ಮಾಹಿತಿ ಇರಲಿಲ್ಲ.

ಗ್ರಾಮದ ಅಂಚೆ ಕಚೇರಿ ಸಿಬ್ಬಂದಿ ವಿವರ ನೀಡಿದ್ದರು. ಬಳಿಕ ಮಂಡ್ಯ ಕಚೇರಿಗೆ ಮಾಹಿತಿ ನೀಡಿದ್ದರು. ನಂತರ ಅಪಘಾತಕ್ಕೆ ಸಂಬಂಧಿಸಿದ ದಾಖಲೆ ಸಂಗ್ರಹಿಸಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ 10 ಲಕ್ಷ ರೂ ಪರಿಹಾರದ ಮೊತ್ತ ಬಂದಿದ್ದು, ಗುರುವಾರ ನಗರದ ಕಚೇರಿಯಲ್ಲಿ ಅಂಚೆ ಅಧೀಕ್ಷಕ ಎಂ.ಲೋಕನಾಥ್, ಬಸವರಾಜು ಕುಟುಂಬದವರಿಗೆ ಚೆಕ್ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಉಪ ಅಂಚೆ ಅಧೀಕ್ಷಕ ಗಜೇಂದ್ರ, ಅಂಚೆ ನಿರೀಕ್ಷಕ ಷಣ್ಮುಗಂ, ಬ್ರಾೃಂಚ್ ಮ್ಯಾನೇಜರ್ ದೀಪಕ್, ವಿಭಾಗೀಯ ಮ್ಯಾನೇಜರ್ ಗಿರೀಶ್ ಇತರರಿದ್ದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section