ಭಾರತೀಯ ವಾಯುಪಡೆಗೆ ಸೇರಿತು ಮೊದಲ ಎಚ್‌ಎಎಲ್‌ ತೇಜಸ್‌ ವಿಮಾನ

0
107

ಬೆಂಗಳೂರು, ಅ.4: ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದೊಂದಿಗೆ ಬೆಂಗಳೂರಿನ ಹೆಚ್‍ಎಎಲ್ ಅಭಿವೃದ್ಧಿಪಡಿಸಿದ ಹಗುರ ಯುದ್ಧ ವಿಮಾನ ತೇಜಸ್‍ನ ಮೊದಲ ಟ್ವಿನ್ ಸೀಟರ್ ವಾಯುಪಡೆ ಸೇರಿದೆ.

ಬೆಂಗಳೂರಿನ ಹೆಚ್‍ಎಎಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಖಾತೆಯ ಸಹಾಯಕ ಸಚಿವ ಅಜಯ್ ಭಟ್, ಏರ್ ಮಾರ್ಷಲ್ ವಿಆರ್ ಚೌಧರಿಗೆ ತೇಜಸ್ ಟ್ವಿನ್ ಸೀಟರ್ ವಿಮಾನವನ್ನು ಹಸ್ತಾಂತರಿಸಲಾಯ್ತು.

ವಾಯುಸೇನೆಯ ತರಬೇತಿ ಅಗತ್ಯಗಳಿಗೆ ಅನುಗುಣವಾಗಿ ಇಬ್ಬರು ಕುಳಿತುಕೊಳ್ಳುವಂತೆ ತೇಜಸ್ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಯುದ್ಧ ವಿಮಾನವಾಗಿ ಕೆಲಸ ಮಾಡುವ ಸಾಮರ್ಥ್ಯ ಇದಕ್ಕಿದೆ.

LEAVE A REPLY

Please enter your comment!
Please enter your name here