ಇಂಡಿಯಾ ಪೋಸ್ಟ್ ಆಫೀಸ್ ಶಾಖಾ ಅಂಚೆ ಕಚೇರಿಗಳು ಇನ್ನು ಮುಂದೆ ಹೈಟೆಕ್‌!

By: Ommnews

Date:

Share post:

ಮಂಗಳೂರು, ಅ. 4 : ಎಲ್ಲ ಶಾಖಾ ಅಂಚೆ ಕಚೇರಿಗಳಲ್ಲಿ ಉನ್ನತ ಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಹೈಟೆಕ್‌ ಸೌಲಭ್ಯವನ್ನು ಪರಿಚಯಿಸಲಾಗಿದೆ. ಅ. 3ರಿಂದ ದೇಶದ ಸುಮಾರು 1,29,854 ಶಾಖಾ ಅಂಚೆ ಕಚೇರಿಗಳು ಈ ರೀತಿ ಉನ್ನತೀಕರಣಗೊಂಡಿವೆ.

Advertisement
Advertisement
Advertisement

ಶಾಖಾ ಅಂಚೆ ಕಚೇರಿಗಳಲ್ಲಿ ಇದುವರೆಗೆ ಬಳಕೆಯಲ್ಲಿ ಇದ್ದ “ಹ್ಯಾಂಡ್‌ ಹೆಲ್ಡ್‌ ಡಿವೈಸ್‌’ ಬದಲಿಗೆ “ಸಿಮ್‌ ಆಧಾರಿತ ಆಂಡ್ರಾಯ್ಡ ಮೊಬೈಲ್‌’ ಮುಖಾಂತರ ವ್ಯವಹರಿಸುವ ತಂತ್ರಜ್ಞಾನಕ್ಕೆ ಬದಲಾಯಿಸಲಾಗಿದೆ.

ಗ್ರಾಹಕರಿಗೆ ತೊಂದರೆಯಾಗದಂತೆ ಅ. 1 ಮತ್ತು 2ರಂದು ಹಳೆಯ ತಂತ್ರಾಂಶವನ್ನು ಸಂಪೂರ್ಣ ಬದಲಾಯಿಸಲಾಗಿದೆ.

ಗ್ರಾಹಕರಿಗೆ ಉನ್ನತ ಮಟ್ಟದ ಸೇವೆಯನ್ನು ಕೊಡುವ ಉದ್ದೇಶದಿಂದಾಗಿ ಹಳೆಯ ತಂತ್ರಜ್ಞಾನದಲ್ಲಿದ್ದ ತೊಂದರೆಗಳನ್ನು ನಿವಾರಿಸಿ ಹೊಸ “ಸಿಮ್‌ ಆಧಾರಿತ ಆಂಡ್ರಾಯ್ಡ ಮೊಬೈಲ್‌’ ಸೇವೆಯನ್ನು ಪರಿಚಯಿಸಲಾಗಿದೆ. ಅಂಚೆ ಇಲಾಖೆಯು ಗ್ರಾಹಕರಿಗೆ ದಕ್ಷತೆ, ಪ್ರಾಮಾಣಿಕತೆ ಹಾಗೂ ತ್ವರಿತ ಗತಿಯ ಸೇವೆಯನ್ನು ಕೊಡಲು ಇದರಿಂದ ಸಾಧ್ಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಗ್ರಾಹಕರಿಗೆ ಸಂದೇಶ

ಮಂಗಳೂರು ವಿಭಾಗದ ಎಲ್ಲ 95, ಪುತ್ತೂರು ವಿಭಾಗದ 321 ಮತ್ತು ಉಡುಪಿ ವಿಭಾಗದ ಎಲ್ಲ 200 ಶಾಖಾ ಅಂಚೆ ಕಚೇರಿಗಳಿಗೆ ಹೊಸ “ಆಂಡ್ರಾಯ್ಡ ಮೊಬೈಲ್‌’ಗಳನ್ನು ವಿತರಿಸಿ ಬದಲಾವಣೆಯ ಬಗ್ಗೆ ಸಿಬಂದಿ ಅವರಿಗೆ ಬೇಕಾಗುವ ತರಬೇತಿ ಕೊಡಲಾಗಿದೆ. ಈಗ ಗ್ರಾಹಕರು ಮಾಡುವ ವ್ಯವಹಾರದ ಮಾಹಿತಿಯು ಗ್ರಾಹಕರ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ಗ್ರಾಹಕರ ಸೇವೆಯನ್ನು ತ್ವರಿತವಾಗಿ ನಿಭಾಯಿಸಲು ಇದು ಸಹಕಾರಿಯಾಗಿದೆ. ಬಹುಮುಖ್ಯವಾಗಿ, ಹಿಂದಿನ ಹ್ಯಾಂಡ್‌ ಹೆಲ್ಡ್‌ ಡಿವೈಸ್‌ನಲ್ಲಿ ಕಂಡುಬರುತ್ತಿದ್ದ ನೆಟ್‌ವರ್ಕ್‌ ಸಮಸ್ಯೆ ಹೊಸ ಬದಲಾವಣೆಯೊಂದಿಗೆ ನಿವಾರಣೆಯಾಗುವ ಆಶಯದಿಂದ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ.

ಶಾಖಾ ಕಚೇರಿಗಳಲ್ಲಿ ಹ್ಯಾಂಡ್‌ ಹೆಲ್ಡ್‌ ಡಿವೈಸ್‌ ಮೂಲಕ ದರ್ಪಣ್‌ 1.0 ಎಂಬ ವ್ಯವಸ್ಥೆ ಜಾರಿಯಲ್ಲಿತ್ತು. ಈಗ ದರ್ಪಣ್‌ 2.0 ಎಂಬ ಹೊಸ ವ್ಯವಸ್ಥೆ ಬಂದಿದೆ. ಅದರ ಆಧಾರದಲ್ಲಿ ಮೊಬೈಲ್‌ ಕೂಡ ನೀಡಲಾಗಿದೆ. ಕೆಲವು ಕಡೆ ನೆಟ್‌ವರ್ಕ್‌ ಸಮಸ್ಯೆ ಇರುವಲ್ಲಿಗೆ ಇದರಿಂದ ಪರಿಹಾರ ಸಿಗಲಿದೆ. ಜತೆಗೆ ಗ್ರಾಹಕರಿಗೆ ತ್ವರಿತ ಸೇವೆ ನೀಡಲು ಸಾಧ್ಯವಾಗಲಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section