ಏಷ್ಯನ್ ಗೇಮ್ಸ್ 2023: ಆರ್ಚರಿ ಕಾಂಪೌಂಡ್ ವಿಭಾಗದ ಮಿಶ್ರ ಸ್ಪರ್ಧೆಯಲ್ಲಿ ಓಜಸ್ ಪ್ರವೀಣ್ ಡಿಯೋಟಾಲೆ ಮತ್ತು ಜ್ಯೋತಿ ಸುರೇಖಾ ವೆನ್ನಂ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಪ್ರವೀಣ್ ಮತ್ತು ಜ್ಯೋತಿ ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಕಜಕಿಸ್ತಾನ್ ಜೋಡಿಯನ್ನು 159-154 ರಿಂದ ಸೋಲಿಸಿ ಫೈನಲ್ ತಲುಪಿದ್ದರು. ಇನ್ನು ಫೈನಲ್ನಲ್ಲಿ ಭಾರತದ ಆರ್ಚರಿ ತಂಡದ ಮುಂದೆ ಕೊರಿಯಾ ಜೋಡಿ ಆರಂಭದಿಂದಲೇ ಒತ್ತಡಕ್ಕೆ ಸಿಲುಕಿತ್ತು. ಮೊದಲ ಸೆಟ್‌ನಲ್ಲಿ ಭಾರತದ ಜೋಡಿ 40 ಅಂಕಗಳು ಕಲೆಹಾಕಿತು. ಕೊರಿಯಾದ ಆರ್ಚರಿ ತಂಡ 38 ಅಂಕ ಕಲೆಹಾಕಿತು. ಮುಂದಿನ ಸುತ್ತಿನಲ್ಲೂ ಭಾರತದ ಜೋಡಿ 6 ಪ್ರಯತ್ನದಲ್ಲೂ ತಲಾ 10 ಅಂಕ ಸಂಪಾದಿಸಿತು. ಆದರೆ ಕೊರಿಯಾದ ಜೋಡಿ ನಿಧಾನವಾಗಿ ಆಟಕ್ಕೆ ಮರಳಿತು. ಈ ವೇಳೆ ಶಾಟ್ ನಂಬರ್ 9ರಲ್ಲಿ ಪ್ರವೀಣ್ 9 ಅಂಕ ಕಲೆಹಾಕಿದರು. ಆ ತಪ್ಪಿನ ಲಾಭ ಪಡೆದ ಕೊರಿಯಾದ ಬಿಲ್ಲುಗಾರರು ಸ್ಕೋರ್ ಸಮಗೊಳಿಸಿದರು.
ಅಂತಿಮ ಸೆಟ್‌ನಲ್ಲಿ ಭಾರತದ ಜೋಡಿ ತಲಾ 10 ಅಂಕ ಸಂಪಾದಿಸಿತು. ಆದರೆ ಅಂತಿಮ ಸೆಟ್‌ನಲ್ಲಿ ಒತ್ತಡಕ್ಕೆ ಸಿಲುಕಿದ ಕೊರಿಯನ್ ಜೋಡಿ 19 ಅಂಕ ಕಲೆಹಾಕಿತು. ಅಂತಿಮವಾಗಿ ಭಾರತದ ಜೋಡಿಯು 159-158 ಅಂಕಗಳೊಂದಿಗೆ ಜೋ ಜೆಹುನ್ ಮತ್ತು ಸೊ ಚಿಯೋನ್ ಜೋಡಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟಿತು.
ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತ ಸದ್ಯ 16ನೇ ಚಿನ್ನದ ಪದಕದೊಂದಿಗೆ 71 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…