ಏಷ್ಯನ್ ಗೇಮ್ಸ್ 2023: ಬಿಲ್ಲುಗಾರಿಕೆಯಲ್ಲಿ ಭಾರತದ ಜ್ಯೋತಿ, ಪ್ರವೀಣ್ ಗೆ ಚಿನ್ನದ ಪದಕ

By: Ommnews

Date:

Share post:

ಏಷ್ಯನ್ ಗೇಮ್ಸ್ 2023: ಆರ್ಚರಿ ಕಾಂಪೌಂಡ್ ವಿಭಾಗದ ಮಿಶ್ರ ಸ್ಪರ್ಧೆಯಲ್ಲಿ ಓಜಸ್ ಪ್ರವೀಣ್ ಡಿಯೋಟಾಲೆ ಮತ್ತು ಜ್ಯೋತಿ ಸುರೇಖಾ ವೆನ್ನಂ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಪ್ರವೀಣ್ ಮತ್ತು ಜ್ಯೋತಿ ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಕಜಕಿಸ್ತಾನ್ ಜೋಡಿಯನ್ನು 159-154 ರಿಂದ ಸೋಲಿಸಿ ಫೈನಲ್ ತಲುಪಿದ್ದರು. ಇನ್ನು ಫೈನಲ್​ನಲ್ಲಿ ಭಾರತದ ಆರ್ಚರಿ ತಂಡದ ಮುಂದೆ ಕೊರಿಯಾ ಜೋಡಿ ಆರಂಭದಿಂದಲೇ ಒತ್ತಡಕ್ಕೆ ಸಿಲುಕಿತ್ತು. ಮೊದಲ ಸೆಟ್‌ನಲ್ಲಿ ಭಾರತದ ಜೋಡಿ 40 ಅಂಕಗಳು ಕಲೆಹಾಕಿತು. ಕೊರಿಯಾದ ಆರ್ಚರಿ ತಂಡ 38 ಅಂಕ ಕಲೆಹಾಕಿತು. ಮುಂದಿನ ಸುತ್ತಿನಲ್ಲೂ ಭಾರತದ ಜೋಡಿ 6 ಪ್ರಯತ್ನದಲ್ಲೂ ತಲಾ 10 ಅಂಕ ಸಂಪಾದಿಸಿತು. ಆದರೆ ಕೊರಿಯಾದ ಜೋಡಿ ನಿಧಾನವಾಗಿ ಆಟಕ್ಕೆ ಮರಳಿತು. ಈ ವೇಳೆ ಶಾಟ್ ನಂಬರ್ 9ರಲ್ಲಿ ಪ್ರವೀಣ್ 9 ಅಂಕ ಕಲೆಹಾಕಿದರು. ಆ ತಪ್ಪಿನ ಲಾಭ ಪಡೆದ ಕೊರಿಯಾದ ಬಿಲ್ಲುಗಾರರು ಸ್ಕೋರ್ ಸಮಗೊಳಿಸಿದರು.

Advertisement
Advertisement
Advertisement

ಅಂತಿಮ ಸೆಟ್‌ನಲ್ಲಿ ಭಾರತದ ಜೋಡಿ ತಲಾ 10 ಅಂಕ ಸಂಪಾದಿಸಿತು. ಆದರೆ ಅಂತಿಮ ಸೆಟ್​ನಲ್ಲಿ ಒತ್ತಡಕ್ಕೆ ಸಿಲುಕಿದ ಕೊರಿಯನ್ ಜೋಡಿ 19 ಅಂಕ ಕಲೆಹಾಕಿತು. ಅಂತಿಮವಾಗಿ ಭಾರತದ ಜೋಡಿಯು 159-158 ಅಂಕಗಳೊಂದಿಗೆ ಜೋ ಜೆಹುನ್ ಮತ್ತು ಸೊ ಚಿಯೋನ್ ಜೋಡಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟಿತು.

ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಸದ್ಯ 16ನೇ ಚಿನ್ನದ ಪದಕದೊಂದಿಗೆ 71 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section