ಸುಳ್ಯ: ಮೈರೋಳ್ ಹಣ್ಣಿನ ಶರ್ಬತ್ ತಯಾರಿಸಿ ಸೇವಿಸಿದ ಮಹಿಳೆ ಸಾವು

By: Ommnews

Date:

Share post:

ಸುಳ್ಯ,ಅ. 03 : ಸರಿಯಾದ ಮಾಹಿತಿ ಇಲ್ಲದೇ ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ಅಮರಪಡ್ಡೂರು ಗ್ರಾಮದ ಕುಳ್ಳಾಜಿ ಎಂಬಲ್ಲಿ ನಡೆದಿದೆ.

Advertisement
Advertisement
Advertisement

ಮೃತರನ್ನು ಜಗನ್ನಾಥ ನಾಯ್ಕ ದೊಡ್ಡೇರಿ ಅವರ ಪತ್ನಿ ಲೀಲಾವತಿ (35) ಎಂದು ಗುರುತಿಸಲಾಗಿದೆ.

ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು , ತಿನ್ನಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು, ಅದರ ರಸ ತೆಗೆದು ಶರ್ಬತ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು.ಇದರ ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು.

ಅವರಲ್ಲಿ ಮಗಳು ಮೂರು ಮಕ್ಕಳ ತಾಯಿಯಾಗಿರುವ ಲೀಲಾವತಿಯವರಿಗೆ ವಾಂತಿ, ಭೇದಿ ಆರ೦ಭವಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಸೌಖ್ಯ ತೀವ್ರಗೊ೦ಡು ಅ. 2ರ೦ದು ಹೆಚ್ಚಿನ ಚಿಕಿತ್ಸೆಗಾಗಿ ಮ೦ಗಳೂರಿಗೆ ಕೊ೦ಡೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಮೃತರು ಪತಿ ಜಗನ್ನಾಥ ನಾಯ್ಕ ದೊಡ್ಡೇರಿ, ಪುತ್ರರಾದ ಯತೀಶ್‌, ಯಶ್ವಿನ್‌, ಪುತ್ರಿ ಅಮೂಲ್ಯ ತ೦ದೆ ಲೋಕಯ್ಯ ನಾಯ್ಕ ಕುಳ್ಳಾಜಿ, ತಾಯಿ ಶ್ರೀಮತಿ ಸರೋಜ ಸೇರಿದಂತೆ ಕುಟು೦ಬಸ್ಥರು, ಬ೦ಧು ಮಿತ್ರರನ್ನು ಅಗಲಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section