2023 ರ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಅಕ್ಟೋಬರ್ 3 ರಂದು ಹ್ಯಾಂಗ್ಝೌನಲ್ಲಿ ನಡೆದ ಪುರುಷರ ಕ್ಯಾನೋ ಡಬಲ್ 1000 ಮೀ ಫೈನಲ್ನಲ್ಲಿ ಭಾರತದ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಮ್ ಅವರು ಕಂಚಿನ ಪದಕವನ್ನು ಪಡೆದರು. ಭಾರತದ ಜೋಡಿಯು 3:53.329 ಸೆಕೆಂಡ್ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಗಳಿಸಿ ಏಷ್ಯನ್ ಗೇಮ್ಸ್ ಇತಿಹಾಸದ ಈವೆಂಟ್ನಲ್ಲಿ ದೇಶಕ್ಕೆ ಎರಡನೇ ಪದಕ ತಂದುಕೊಟ್ಟರು.
ಉಜ್ಬೇಕಿಸ್ತಾನದ ಶೋಖ್ಮುರೋಡ್ ಖೋಲ್ಮುರಾಡೋವ್ ಮತ್ತು ನುರಿಸ್ಲೋಮ್ ತುಖ್ತಾಸಿನ್ ಉಗ್ಲಿ 3:43.796 ಸೆಕೆಂಡ್ಗಳಲ್ಲಿ ಚಿನ್ನ ಗೆದ್ದರೆ, ಕಜಕಿಸ್ತಾನ್ ಜೋಡಿ ಟಿಮೊಫಿ ಯೆಮೆಲಿಯಾನೊವ್ ಮತ್ತು ಸೆರ್ಗೆ ಯೆಮೆಲಿಯಾನೊವ್ 3:49.991 ಸೆಕೆಂಡ್ಗಳಲ್ಲಿ ಬೆಳ್ಳಿ ಪಡೆದರು. ಸದ್ಯ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪದಕಗಳ ಸಂಖ್ಯೆ 60ಕ್ಕೆ ಏರಿದೆ.