ಪುತ್ತೂರಿನ ಯುವಕ ನೀರಿನಲ್ಲಿ ಮುಳುಗಿ ಕೇರಳದಲ್ಲಿ ಸಾವು

0
126

ಪುತ್ತೂರು : ಪುತ್ತೂರಿನ ಯುವಕನೋರ್ವ ನೀರಿನಲ್ಲಿ ಮುಳುಗಿ ಕೇರಳದಲ್ಲಿ ಮೃತಪಟ್ಟ ಘಟನೆ ಕಣ್ಣೂರಿನ ಕಡಂಬೆರಿಯಲ್ಲಿ ಸೆ.30ರ ಶನಿವಾರ ನಡೆದಿದೆ.

ಪುತ್ತೂರಿನ ಉಪ್ಪಿನಂಗಡಿಯ ಹಿರೇಬಂಡಾಡಿ‌ ನಿವಾಸಿ ಮಹಮ್ಮದ್ ಅಝೀಮ್ (21) ಮೃತ ಯುವಕ ಎಂದು ತಿಳಿದು ಬಂದಿದೆ.

ಪುತ್ತೂರಿನಿಂದ ಐವರು ಕೇರಳಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆ ಕಣ್ಣೂರಿನ ಕಡಂಬೆರಿಯಲ್ಲಿ ಇಬ್ಬರು ಯುವಕರು ಈಜಲೆಂದು ನೀರಿಗೆ ಇಳಿದಿದ್ದ ಸಂದರ್ಭ ಈ ಘಟನೆ ನಡೆದಿದೆ.

ಈ ವೇಳೆ ಮಹಮ್ಮದ್ ಅಝೀಮ್ ನೀರಿನ ಆಳ ತಿಳಿಯದೆ ಈಜಲು ಬಾರದೇ ಉಸಿರುಗಟ್ಟಿ ಸಾವನಪ್ಪಿದ್ದು, ಇನ್ನೋರ್ವನನ್ನು ಕಡಂಬೆರಿಯ ಸ್ಥಳೀಯ ನಿವಾಸಿಗಳು ರಕ್ಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here