ಇಂಡಿಯಾ ಮೈತ್ರಿಕೂಟ ಸನಾತನ ಧರ್ಮ ಮತ್ತು ಹಿಂದೂ ವಿರೋಧಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

0
102

ದೆಹಲಿ, ಸೆ.15 : ಡಿಎಂಕೆ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಹಿಂದೂಗಳು ಮತ್ತು ‘ಸನಾತನ ಧರ್ಮ’ದ ವಿರುದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸನಾತನ ಧರ್ಮ, ಜನರ ನಡುವೆ ವಿಭಜನೆ ಮತ್ತು ತಾರತಮ್ಯವನ್ನು ಪ್ರೇರೇಪಿಸುತ್ತಿದೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ವಿರುದ್ದ ಸಚಿವೆ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಅನ್ನು ನೇರವಾಗಿ ಟಾರ್ಗೆಟ್ ಮಾಡಿದ ನಿರ್ಮಲಾಸೀತಾರಾಮನ್, ಪ್ರಸ್ತುತ ಪಕ್ಷ ಭಾರತವನ್ನು ಒಡೆಯಲು ಬಯಸುವ ಗುಂಪುಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ಇತರ ನಾಯಕರ ಡಿಎಂಕೆ ನಾಯಕನ ಹೇಳಿಕೆ ಬಗ್ಗೆ ಅಂತರ ಕಾಪಾಡಿದ್ದರೂ ಬಿಜೆಪಿ, ಕಾಂಗ್ರೆಸ್ ಪಕ್ಷದ ಮೇಲೆ ಟೀಕಾ ಪ್ರಹಾರ ಮಾಡಿದೆ.

“ಇದು ಸನಾತನ ಧರ್ಮದ ವಿರುದ್ಧವಲ್ಲ, ಆದರೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕರೆ ಎಂದು ಸಚಿವರು ಬಹಿರಂಗವಾಗಿ ಹೇಳಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದು, ಇಂಡಿಯಾ ಮೈತ್ರಿಕೂಟದ ಯಾವುದೇ ಘಟಕವು ಟೀಕೆಗಳನ್ನು ಖಂಡಿಸಿಲ್ಲ ಎಂದಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡಿದ ಸಚಿವರು, ಸನಾತನ ವಿರೋಧ ಡಿಎಂಕೆಯಲ್ಲಿನ ನೀತಿ ಆಗಿದೆ. ನಾನು ಅದನ್ನು ಖುದ್ದಾಗಿ ನೋಡಿದ್ದೇನೆ ಎಂದು ಹೇಳಿದ್ದಾರೆ.

ತಮಿಳುನಾಡಿನ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾಷೆಯ ತಡೆಯಿಂದಾಗಿ ದೇಶದ ಉಳಿದವರಿಗೆ ಇದು ಅರ್ಥವಾಗಲಿಲ್ಲ. ಇದು ಯಾವಾಗಲೂ ಹಾಗೆ. ಈಗ ಸೋಷಿಯಲ್ ಮೀಡಿಯಾದಿಂದಾಗಿ ಮಂತ್ರಿಯೊಬ್ಬರು ಏನು ಹೇಳುತ್ತಿದ್ದಾರೆಂದು ತಿಳಿಯಲು ಅನುವಾದಕರೇ ಬೇಕಾಗಿಲ್ಲ. ಇದು ಆಶ್ಚರ್ಯವೇನಿಲ್ಲ. 70 ವರ್ಷಗಳಿಂದ ಡಿಎಂಕೆ ಇದನ್ನು ಮಾಡುತ್ತಿದೆ. ಇದು ಬೂಟಾಟಿಕೆ.

ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು “ಸಂವಿಧಾನದ ಅಪಹಾಸ್ಯ” ಎಂದು ಕರೆದ ಅವರು, ತಮಿಳುನಾಡು ಸಚಿವರು ಸಾರ್ವಜನಿಕ ಕಚೇರಿಯಲ್ಲಿ ತಮ್ಮ ಪ್ರಮಾಣವಚನವನ್ನು ಉಲ್ಲಂಘಿಸುತ್ತಾರೆ ಎಂದು ತಿಳಿದಿದ್ದರೂ ಅವರು ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here