ಚಲನಚಿತ್ರ

ಖ್ಯಾತ ನಟ ಧನುಷ್ ಸೇರಿದಂತೆ 4 ಜನ ಸ್ಟಾರ್ ನಟರಿಗೆ ಬ್ಯಾನ್ ಬಿಸಿ

ತಮಿಳು ಚಿತ್ರೋದ್ಯಮದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಹೆಸರಾಂತ ನಟ ಧನುಷ್ ಸೇರಿದಂತೆ ನಾಲ್ವರು ಸ್ಟಾರ್ ನಟರಿಗೆ ಅಲ್ಲಿನ ನಿರ್ಮಾಪಕರ ಸಂಘವು ರೆಡ್ ಕಾರ್ಡ್ ನೀಡಿದ್ದು, ನಿರ್ಮಾಪಕರಿಗೆ ಇವರು ಅಪಾರ ಹಾನಿಯನ್ನಿಂಟು ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನಿಷೇಧದ ಕಠಿಣ ಕ್ರಮಕ್ಕೆ ಮುಂದಾಗಿದೆ.

Advertisement
Advertisement
Advertisement

ಎರಡು ದಿನಗಳ ಹಿಂದೆ ನಡೆದ ನಿರ್ಮಾಪಕರ ಸಂಘದ ಸಭೆಯಲ್ಲಿ ವಿಶಾಲ್, ಧನುಷ್, ಅಥರ್ವ್ ಮತ್ತು ಸಿಂಬುಗೆ ರೆಡ್ ಕಾರ್ಡ್ ನೀಡಿದ್ದು, ಕಠಿಣ ಕ್ರಮದ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕಳೆ ಕೆಲವು ತಿಂಗಳ ಹಿಂದೆ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ ಹಾಗೂ ಕಲಾವಿದರ ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು ಕಲಾವಿದರ ಮೇಲೆ ಆರೋಪ ಮಾಡಿದ್ದರು. ಅದರಲ್ಲೂ ಪ್ರಮುಖವಾಗಿ ಧನುಷ್, ರಾಯ್ ಲಕ್ಷ್ಮಿ , ಅಮಲಾ ಪೌಲ್ ವಿರುದ್ಧವೂ ದೂರು ದಾಖಲಾಗಿತ್ತು.

ತೇನಾಂಡಾಲ್ ಫಿಲ್ಮ್ ಸಂಸ್ಥೆಯು ಧನುಷ್ ಗಾಗಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದೆ. ಒಂದು ತಿಂಗಳ ಕಾಲ ಶೂಟಿಂಗ್ ಕೂಡ ನಡೆದಿದೆ. ಕಾರಣಾಂತರಗಳಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಶೂಟಿಂಗ್ ಮಾಡುವಂತೆ ಧನುಷ್ ಗೆ ಮನವಿ ಮಾಡಲಾಗಿದೆ. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿದೆ. ಈ ಸಿನಿಮಾಗಾಗಿ ಸಂಸ್ಥೆಯು 20 ಕೋಟಿ ರೂಪಾಯಿಯನ್ನು ಧನುಷ್ ಗೆ ನೀಡಿದೆಯಂತೆ.

ಕಾಲ್ ಶೀಟ್ ನೀಡದೇ ಇರುವುದು ಒಂದು ಸಮಸ್ಯೆಯಾದರೆ, ಕೆಲ ನಟಿಯರು ಚಿತ್ರೀಕರಣಕ್ಕೆ ಬಂದರೆ, ಅವರಿಗೆ ಹತ್ತು ಜನ ಸೆಕ್ಯೂರಿಟಿ ಗಾರ್ಡ್ ಗಳು ಬೇಕೆಂದು ಹೇಳುತ್ತಾರಂತೆ. ಇದರಿಂದಾಗಿ ಭಾರೀ ಮೊತ್ತದ ಹಣವನ್ನೇ ಸಂಸ್ಥೆಯು ನೀಡಬೇಕಾಗಿದೆ. ಇದನ್ನು ತಪ್ಪಿಸುವಂತೆ ಫಿಲ್ಮ್ ಚೇಂಬರ್ ಗೆ ಕೆಲವು ನಿರ್ಮಾಪಕರು ಪತ್ರ ಬರೆದಿದ್ದಾರೆ. ಸೆಕ್ಯೂರಿಟಿ ಬೇಕಾದ ನಟಿಯರು ತಾವೇ ದುಡ್ಡು ಕೊಟ್ಟ ನೇಮಿಸಿಕೊಳ್ಳಲಿ ಎನ್ನುವುದು ನಿರ್ಮಾಪಕರ ವಾದವಾಗಿತ್ತು.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago