ರಾಕೆಟ್ ಉಡಾವಣಾ ಸ್ಥಳದಲ್ಲಿ ಕಿಮ್ ಜಾಂಗ್ ಉನ್​​ರನ್ನು ಭೇಟಿಯಾದ ರಷ್ಯಾ ಅಧ್ಯಕ್ಷ ಪುಟಿನ್

By: Ommnews

Date:

Share post:

ವ್ಲಾಡಿವೋಸ್ಟೋಕ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ರಷ್ಯಾದ ಪೂರ್ವ ಭಾಗದಲ್ಲಿರುವ ಅತ್ಯಂತ ಆಧುನಿಕ ಬಾಹ್ಯಾಕಾಶ ರಾಕೆಟ್ ಉಡಾವಣಾ ಸ್ಥಳದಲ್ಲಿ ಇಂದು (ಸೆ.13) ಭೇಟಿಯಾಗಿದ್ದಾರೆ ಎಂದು ಟಾಸ್ ವರದಿ ಮಾಡಿದೆ. ಇದೀಗ ಉಭಯ ನಾಯಕ ಭೇಟಿಯು ವಿಶ್ವ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

Advertisement
Advertisement
Advertisement

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರು ರಷ್ಯಾದ ದೂರದ ಪೂರ್ವದಲ್ಲಿರುವ ಬಾಹ್ಯಾಕಾಶ ಕೇಂದ್ರದಲ್ಲಿ ಭೇಟಿಯಾಗಿದ್ದಾರೆ. ಈ ಭೇಟಿಯ ಹಿಂದೆ ಮಹತ್ವ ಹೆಜ್ಜೆಯೊಂದು ಇದೆ ಎಂದು ಹೇಳಲಾಗಿದೆ. ಉಕ್ರೇನ್ ಯುದ್ಧದ ಸಮಯದಲ್ಲಿ ರಷ್ಯಾ ಉತ್ತರ ಕೊರಿಯಾದ ಮಾಸ್ಕೋದ ಬಳಕೆಗಾಗಿ ಪ್ಯೊಂಗ್ಯಾಂಗ್ ಶಸ್ತ್ರಾಸ್ತ್ರಗಳನ್ನು ಪೂರೈಸುವ ಶಸ್ತ್ರಾಸ್ತ್ರ ಒಪ್ಪಂದವನ್ನು ಮಾಡಲಾಗಿತ್ತು. ಇದೀಗ ಇದಕ್ಕೆ ಬದಲಾಗಿ ರಷ್ಯಾ ಉತ್ತರ ಕೊರಿಯಾಕ್ಕೆ ಉಪಗ್ರಹ ಉಡಾವಣಾ ತಂತ್ರಜ್ಞಾನ ನೀಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇನ್ನು ಈ ಭೇಟಿಯ ವೇಳೆ ಇಬ್ಬರು ನಾಯಕರು ಪರಸ್ಪರ ಕೈಕುಲುಕಿದರು. ಜತೆಗೆ ಸ್ವಲ್ಪ ಸಮಯಗಳ ವರೆಗೆ ಸಂಕ್ಷಿಪ್ತವಾಗಿ ಮಾತಕತೆ ನಡೆಸಿದ್ದಾರೆ. ರಷ್ಯಾದ ಪೂರ್ವ ಬಾಹ್ಯಾಕಾಶ ಕೇಂದ್ರದಲ್ಲಿ ಈ ಭೇಟಿ ತುಂಬಾ ವಿಶೇಷವಾಗಿದೆ. ವರದಿಗಳ ಪ್ರಕಾರ ಉಕ್ರೇನ್‌ನ ಮೇಲೆ ರಷ್ಯಾ ಯುದ್ಧವನ್ನು ನಡೆಸಿದಾಗ, ಉತ್ತರ ಕೊರಿಯಾ ಮಾಸ್ಕೋದ ಯುದ್ಧ ಸಲಕರಣೆಗಳನ್ನು ಬಳಸಿಕೊಳ್ಳುತ್ತಿತ್ತು. ಇದೀಗ ಇದಕ್ಕೆ ಬದಲಾಗಿ ಉತ್ತರ ಕೊರಿಯಾ ರಷ್ಯಾದ ಉಪಗ್ರಹ ಉಡಾವಣಾ ತಂತ್ರಜ್ಞಾನವನ್ನು ತೆಗೆದುಕೊಳ್ಳವ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಎಂದು ಹೇಳಲಾಗಿದೆ.

ರಷ್ಯಾವು ಉಕ್ರೇನ್‌ನ ಮೇಲೆ ಸುಮಾರು 18 ತಿಂಗಳುಗಳಿಗಿಂತಲ್ಲೂ ಹೆಚ್ಚು ಕಾಲ ಯುದ್ಧ ನಡೆಸಿತ್ತು. ಈ ಸಂದರ್ಭದಲ್ಲಿ ಮಾಸ್ಕೋಗೆ ಹೊಸ ಮದ್ದುಗುಂಡುಗಳು ಮತ್ತು ಶೆಲ್‌ಗಳ ಅವಶ್ಯಕತೆಯಿತ್ತು, ಇದಕ್ಕಾಗಿ ರಷ್ಯಾ ಉತ್ತರ ಕೊರಿಯಾವನ್ನು ಆಶ್ರಯಿಸಿತ್ತು ಎಂದು ಹೇಳಲಾಗಿದೆ. ಆದರೆ ಉತ್ತರ ಕೊರಿಯಾವು ತನ್ನ ಪರಮಾಣು ಶಸ್ತ್ರಾಸ್ತ್ರಗಳ ಯೋಜನೆಯ ಮೇಲೆ ವರ್ಷಗಳ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿದೆ. ಅದಕ್ಕಾಗಿ ಇದೀಗ ಈ ಯೋಜನೆಗಳನ್ನು ಪೂರ್ಣಗೊಳಿಸಲು ರಷ್ಯಾದ ಸಹಾಯ ಬೇಕಾಗಿದೆ, ಅದಕ್ಕಾಗಿ ಈ ಮಹತ್ವ ಭೇಟಿಯನ್ನು ಮುಂದಿಟ್ಟಿದೆ.

ತನ್ನ ಪತ್ತೇದಾರಿ ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ವಿಫಲವಾಗಿರುವ ಉತ್ತರ ಕೊರಿಯಾಕ್ಕೆ ಇದೀಗ ಬಾಹ್ಯಾಕಾಶ ತಂತ್ರಜ್ಞಾನವೂ ತುಂಬಾ ಮುಖ್ಯವಾಗಿದೆ. ಈ ಕಾರಣಕ್ಕೆ ತನ್ನದೇ ಅಲ್ಪ-ಸ್ವಲ್ಪ ವಿಚಾರಧಾರೆಗಳನ್ನು ಹೊಂದಿರುವ ರಷ್ಯಾದ ಜತೆಗೆ ಮಹತ್ವ ಮಾತುಕತೆಯನ್ನು ನಡೆಸಲು ಮುಂದಾಗಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section