ಮೋಟೋ G54 5G ಸ್ಮಾರ್ಟ್ಫೋನ್ ಭಾರತದಲ್ಲಿ ಇಂದಿನಿಂದ (ಸೆಪ್ಟೆಂಬರ್ 13) ಫ್ಲಿಪ್‌ಕಾರ್ಟ್ ಮತ್ತು ದೇಶದ ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ಮೊದಲ ಸೇಲ್ ಪ್ರಯುಕ್ತ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳ ಮೂಲಕ ಮಾಡಿದ ಖರೀದಿಗಳಿಗೆ 1,500 ರೂ. ರಿಯಾಯಿತಿ ಇದೆ.

ಲೆನೊವ ಒಡೆತನದ ಪ್ರಸಿದ್ಧ ಬ್ರ್ಯಾಂಡ್ ಮೋಟೋರೊಲ ಕಂಪನಿ ಭಾರತದಲ್ಲಿ ಕಳೆದ ವಾರ ಹೊಚ್ಚ ಹೊಸ ಮೋಟೋ G54 5G (Moto G54 5G) ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಿತ್ತು. 50-ಮೆಗಾಪಿಕ್ಸೆಲ್ ಕ್ಯಾಮೆರಾ, 6,000mAh ಬ್ಯಾಟರಿ ಇರುವ ಈ ಫೋನ್ ಇಂದಿನಿಂದ ಖರೀದಿಗೆ ಸಿಗಲಿದೆ.
ಭಾರತದಲ್ಲಿ ಮೋಟೋ G54 5G ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿತ್ತು. ಇದರ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ 15,999 ರೂ. ಇದೆ. ಅಂತೆಯೆ 12GB RAM + 256GB ಸ್ಟೋರೇಜ್ ಹೊಂದಿರುವ ಟಾಪ್ ಎಂಡ್ ಮಾಡೆಲ್ ಬೆಲೆ 18,999 ರೂ. ಆಗಿದೆ. ಈ ಫೋನ್ ಮಿಡ್‌ನೈಟ್ ಬ್ಲೂ, ಮಿಂಟ್ ಗ್ರೀನ್ ಮತ್ತು ಪಿಯರ್ ಬ್ಲೂ ಬಣ್ಣಗಳಲ್ಲಿ ಬರುತ್ತದೆ.
ಮೋಟೋ G54 5G ಸ್ಮಾರ್ಟ್ಫೋನ್ ಭಾರತದಲ್ಲಿ ಇಂದಿನಿಂದ (ಸೆಪ್ಟೆಂಬರ್ 13) ಫ್ಲಿಪ್‌ಕಾರ್ಟ್ ಮತ್ತು ದೇಶದ ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ಮೊದಲ ಸೇಲ್ ಪ್ರಯುಕ್ತ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳ ಮೂಲಕ ಮಾಡಿದ ಖರೀದಿಗಳಿಗೆ 1,500 ರೂ. ರಿಯಾಯಿತಿ ಇದೆ. EMI ಆಯ್ಕೆಗಳು 668 ರೂ. ಯಿಂದ ಆರಂಭವಾಗುತ್ತದೆ.

ಮೋಟೋ G54 5G ಸ್ಮಾರ್ಟ್ಫೋನ್ ಭಾರತದಲ್ಲಿ ಇಂದಿನಿಂದ (ಸೆಪ್ಟೆಂಬರ್ 13) ಫ್ಲಿಪ್‌ಕಾರ್ಟ್ ಮತ್ತು ದೇಶದ ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ಮೊದಲ ಸೇಲ್ ಪ್ರಯುಕ್ತ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳ ಮೂಲಕ ಮಾಡಿದ ಖರೀದಿಗಳಿಗೆ 1,500 ರೂ. ರಿಯಾಯಿತಿ ಇದೆ. EMI ಆಯ್ಕೆಗಳು 668 ರೂ. ಯಿಂದ ಆರಂಭವಾಗುತ್ತದೆ.
ಮೋಟೋ G54 5G ಫೋನ್ ಆಂಡ್ರಾಯ್ಡ್ 13 ನಲ್ಲಿ ಮೈ UI 5.0 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಈ 5G ಹ್ಯಾಂಡ್‌ಸೆಟ್ 6.5-ಇಂಚಿನ ಪೂರ್ಣ-HD+ ಡಿಸ್ ಪ್ಲೇ ಜೊತೆಗೆ 120Hz ಡೈನಾಮಿಕ್ ರಿಫ್ರೆಶ್ ರೇಟ್ ದರ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7020 SoC ಜೊತೆಗೆ 12GB RAM ಅನ್ನು ಹೊಂದಿದೆ.
ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಹೊಂದಿದೆ. 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಕೂಡ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 16-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.
ಮೋಟೋ G54 5G ಸ್ಮಾರ್ಟ್ಫೋನ್ 6,000mAh ಬ್ಯಾಟರಿಯೊಂದಿಗೆ ಬಿಡುಗಡೆ ಆಗಿದೆ. ಇದು 33W TurboPower ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ವೇಗದ ಚಾರ್ಜಿಂಗ್ ತಂತ್ರಜ್ಞಾನವು ಕೇವಲ 66 ನಿಮಿಷಗಳಲ್ಲಿ ಶೂನ್ಯದಿಂದ 90 ಪ್ರತಿಶತದಷ್ಟು ಬ್ಯಾಟರಿಯನ್ನು ಫುಲ್ ಮಾಡುತ್ತದೆ ಎಂದು ಹೇಳಲಾಗಿದೆ.
ಸಂಪರ್ಕ ಆಯ್ಕೆಗಳಲ್ಲಿ Wi-Fi, ಬ್ಲೂಟೂತ್, GPS, A-GPS, ಗ್ಲೋನಾಸ್, ಗೆಲಿಲಿಯೋ, ಬೀಡು, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ. ಇದು ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದಿಂದ ವರ್ಧಿಸಲ್ಪಟ್ಟ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ.