ನವದೆಹಲಿ: ದೇಶದ ಅತೀ ದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆಯಾದ ಬೈಜೂಸ್ (Byju’s) ಕಳೆದ ಕೆಲವು ತಿಂಗಳಿನಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದು, ಇದೀಗ ಸಾಲದ ಹೊರೆಯನ್ನು ಇಳಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಎರಡು ವಿದೇಶಿ ಕಂಪನಿಗಳನ್ನು ಮಾರಾಟ ಮಾಡಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಬೈಜೂ ರವೀಂದ್ರನ್ ನೇತೃತ್ವದ ಖಾಸಗಿ ಸ್ಟಾರ್ಟ್ ಅಪ್ ಕಂಪನಿ ಸುಮಾರು 8,195 ಕೋಟಿ ರೂಪಾಯಿಗೆ ಎರಡು ವಿದೇಶಿ ಕಂಪನಿಗಳನ್ನು ಖರೀದಿಸಿತ್ತು. ಆದರೆ ಏತನ್ಮಧ್ಯೆ ಅಮೆರಿಕದ ಕಂಪನಿಯೊಂದರಿಂದ ಪಡೆದಿದ್ದ 9,956 ಕೋಟಿ ರೂಪಾಯಿ ಸಾಲವನ್ನು ಮರುಪಾವತಿಸಬೇಕಾಗಿದೆ. ಇದರಿಂದಾಗಿ ಎರಡು ವಿದೇಶಿ ಕಂಪನಿಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎಂದು ವರದಿ ಹೇಳಿದೆ.
ಬೈಜೂಸ್ ಕಂಪನಿ ಮಕ್ಕಳ ಡಿಜಿಟಲ್ ರೀಡಿಂಗ್ ಪ್ಲ್ಯಾಟ್ ಫಾರಂ ಎಪಿಕ್ ಅನ್ನು 500 ಮಿಲಿಯನ್ ಡಾಲರ್ ಗೆ (ಅಂದಾಜು 3,729.8 ಕೋಟಿ) ಹಾಗೂ ಅಪ್ ಸ್ಕಿಲ್ಲಿಂಗ್ ಪ್ಲ್ಯಾಟ್ ಫಾರಂ ಗ್ರೇಟ್ ಲರ್ನಿಂಗ್ ಅನ್ನು 600 ಮಿಲಿಯನ್ ಡಾಲರ್ (ಸುಮಾರು 4,466 ಕೋಟಿ)ಗೆ ಖರೀದಿಸಿತ್ತು. ಇದೀಗ ಬೈಜೂಸ್ ಕಂಪನಿ ಈ ಎಪಿಕ್ ಮತ್ತು ಗ್ರೇಟ್ ಲರ್ನಿಂಗ್ ಕಂಪನಿಗಳನ್ನು 800 ಮಿಲಿಯನ್ ಡಾಲರ್ ನಿಂದ ಒಂದು ಬಿಲಿಯನ್ ಡಾಲರ್ ಮೊತ್ತಕ್ಕೆ ಮಾರಾಟ ಮಾಡಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಮತ್ತೊಂದೆಡೆ ಸಾಲದ ಸುಳಿಗೆ ಸಿಲುಕಿರುವ ಬೈಜೂಸ್ ಈಕ್ವಿಟಿ ಮಾರಾಟದ ಮೂಲಕ ನಗದನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆ. ಸಾಲ ಮರುಪಾವತಿಗಾಗಿ ಬೈಜೂಸ್ ಅಮೆರಿಕದ ಬ್ಯಾಂಕರ್ಸ್ ಜೊತೆ ಸಂಪರ್ಕದಲ್ಲಿದ್ದು, ಮಾತುಕತೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…