ತಂತ್ರಜ್ಞಾನ

ಸಾಮಾನ್ಯ ಸಿಮ್ ಕಾರ್ಡ್ ಬದಲು ಇ-ಸಿಮ್ ಬಳಸಲು ಸಲಹೆ ನೀಡಿದ ಏರ್‌ಟೆಲ್ CEO

ಏರ್‌ಟೆಲ್ ಗ್ರಾಹಕರಿಗೆ ಸಿಇಒ ಗೋಪಾಲ್ ವಿಠಲ್ ಮಹತ್ವದ ಸಲಹೆ ನೀಡಿದ್ದಾರೆ. ಸಾಮಾನ್ಯ ಸಿಮ್ ಕಾರ್ಡ್ ಬದಲು ಇ ಸಿಮ್ ಬಳಕೆಗೆ ಮನವಿ ಮಾಡಿದ್ದಾರೆ.

Advertisement
Advertisement
Advertisement

ಇ ಸಿಮ್ ಕಾರ್ಡ್‌ನಿಂದ ಹಲವು ಪ್ರಯೋಜನಗಳಿವೆ. ಸಾಮಾನ್ಯ ಸಿಮ್‌ಕಾರ್ಡ್‌ಗಿಂತ ಹೆಚ್ಚಿನ ಸುರಕ್ಷತೆಯೂ ಇದರಲ್ಲಿದೆ.ಇಸಿಮ್ ತಂತ್ರಜ್ಞಾನದಲ್ಲಿ ಕಾರ್ಡ್ ಇರುವುದಿಲ್ಲ, ನಿಮ್ಮ ಮೊಬೈಲ್‌ಗೆ ಸ್ಪೆಷಲ್ ಸಾಫ್ಟ್‌ವೇರ್ ಡಿವೈಸ್ ಹಾಕಲಾಗುತ್ತದೆ. ಹೀಗಾಗಿ ಸಿಮ್ ಸ್ಲಾಟ್‌ನಲ್ಲಿ ಯಾವುದೇ ಕಾರ್ಡ್ ಇನ್ಸರ್ಟ್ ಮಾಡಲು ಇಲ್ಲ. ಸಾಫ್ಟ್‌ವೇರ್ ಮೂಲಕ ಇ ಸಿಮ್ ಕಾರ್ಡ್ ಕೆಲಸ ನಿರ್ವಹಿಸುತ್ತದೆ.

ಫೋನ್ ಕಳ್ಳತನವಾದಾಗ ಕಳ್ಳರು ಮೊದಲು ಸಿಮ್ ಹೊರಗೆಸೆಯುತ್ತಾರೆ. ಆದರೆ ಇ ಸಿಮ್‌ ಕಾರ್ಡ್‌ನಲ್ಲಿ ಹೊರಗೆಸೆಯಲು ಏನೂ ಇಲ್ಲ. ಇದರಿಂದ ಕಳ್ಳತನವಾಗಿರುವ ಫೋನ್ ಟ್ರೇಸ್ ಮಾಡಲು ಸುಲಭ.

ಹಳೇ ಫೋನ್‌ನಿಂದ ಡೇಟಾ ಟ್ರಾನ್ಸ್‌ಫರ್, ಕಾಂಟಾಕ್ಟ್ ಸೇರಿದಂತೆ ಇತರ ದಾಖಲೆಗಳ ಟ್ರಾನ್ಸ್‌ಫರ್ ಅತ್ಯಂತ ಸುಲಭ. ಜೊತೆಗೆ ಇಸಿಮ್ ಕಾರ್ಡ್ ಹೆಚ್ಚು ಸುರಕ್ಷಿತ ಅನ್ನೋದು ಸಾಬೀತಾಗಿದೆ.

ಎಲ್ಲಾ ದಾಖಲೆ, ಔದ್ಯೋಗಿಕ, ಖಾಸಗಿ, ಬ್ಯಾಂಕ್ ಖಾತೆ ನಿರ್ವಹಣೆ, ಹಣ ಪಾವತಿ ಎಲ್ಲವೂ ಇದರಿಂದಲೇ ನಡೆಯುತ್ತಿದೆ. ಆದರೆ ಫೋನ್ ಕಳೆದು ಹೋದಾಗ, ಒಡೆದು ಹೋದಾಗ ಡೇಟಾ ಟ್ರಾನ್ಸ್‌ಫರ್ ಸವಾಲಿನ ಕೆಲಸ. ಆದರೆ ಇ ಸಿಮ್ ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡಿದೆ.

ಏರ್‌ಟೆಲ್ ಆಯಪ್ ಮೂಲಕ ಸುಲಭವಾಗಿ ಸಿಮ್ ಕಾರ್ಡ್‌ನಿಂದ ಇಸಿಮ್‌ಗೆ ಬದಲಾಗಬಹುದು. ಏರ್‌ಟೆಲ್ ಗ್ರಾಹಕರು ಈ ಅವಕಾಶವನ್ನು ಬಳಸಿಕೊಂಡು ಸುಲಭವಾಗಿ ಇಸಿಮ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago