DK Shivakumar : ಡಿಕೆಶಿ ಪವರ್ ಗೇಮ್ ಏನು?ಒಕ್ಕಲಿಗರ ಕೋಟೆಯ ಲೆಕ್ಕಾಚಾರ ಏನು?

By: Ommnews

Date:

Share post:

DK Shivakumar: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತವಾಗುತ್ತಿದ್ದಂತೆ ತಮ್ಮ ರಣತಂತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಕೊಂಚ ಬದಲಾವಣೆ ಮಡಿಕೊಂಡಂತೆ ಕಾಣಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಕೊಂಚ ಬದಲಾವಣೆ ಮಡಿಕೊಂಡಂತೆ ಕಾಣಿಸುತ್ತಿದೆ.

Advertisement
Advertisement
Advertisement

ಬಿಜೆಪಿ-ಜೆಡಿಎಸ್ ಮೈತ್ರಿ ಸುಳಿವಿನ ಬೆನ್ನಲ್ಲೇ ಸಖತ್ ಆಕ್ಟಿವ್ ಆಗಿರುವ ಡಿಕೆ ಶಿವಕುಮಾರ್, ಒಕ್ಕಲಿಗರ ಕೋಟೆ ಭೇದಿಸಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಒಕ್ಕಲಿಗರ ಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ ಲೋಕಸಭೆಗೆ ಪ್ರಬಲ ಅಭ್ಯರ್ಥಿ ಹಾಕಲು ಡಿಕೆ ಶಿವಕುಮಾರ್ ಮುಂದಾಗಿದ್ದಾರಂತೆ. ಈ ಸಂಬಂಧ ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮಾಜಿ ಸಂಸದೆ ರಮ್ಯಾ ಅವರನ್ನ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್​ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಮಂಡ್ಯ ಲೋಕಸಭೆ ಕ್ಷೇತ್ರದ 7 ಕ್ಷೇತ್ರಗಳಲ್ಲಿ 6ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವ ಸುಲಭ ಎಂಬುವುದು ಡಿಕೆ ಶಿವಕುಮಾರ್ ಲೆಕ್ಕಾಚಾರ.

ಮಂಡ್ಯದಿಂದ ರಮ್ಯಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಡಿಕೆ ಶಿವಕುಮಾರ್ ತಂತ್ರಗಾರಿಕೆ ರಚನೆ ಮಾಡ್ತಿದ್ದಾರಂತೆ. BJP-JDS ಮೈತ್ರಿ ಅಭ್ಯರ್ಥಿ ಹಾಕಿದ್ರೆ ಟಫ್ ಪೈಟ್ ನೀಡುವ ಕ್ಯಾಂಡಿಡೇಟ್​ ಕಣಕ್ಕಿಳಿಸಬೇಕಾಗುತ್ತದೆ.

ಈಗಾಗಲೇ ಒಂದು ಬಾರಿ ಮಂಡ್ಯದಿಂದ ಸಂಸದೆಯಾಗಿರುವ ರಮ್ಯಾ ಕ್ಷೇತ್ರದಲ್ಲಿ ತಮ್ಮದೇ ರಾಜಕೀಯ ಛಾಪು ಮತ್ತು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಬಿಜೆಪಿ-ಜೆಡಿಎಸ್ ಯಾವುದೇ ಅಭ್ಯರ್ಥಿ ಹಾಕಿದ್ರೂ ರಮ್ಯಾ ಟಫ್ ಫೈಟ್ ಕೊಡ್ತಾರೆ. ಅದರ ಜೊತೆಗೆ ಕ್ಷೇತ್ರದಲ್ಲಿ ಏಳು ಶಾಸಕರು ಕಾಂಗ್ರೆಸ್​ನವರು ಆಗಿರೋ ಕಾರಣ ಗೆಲುವು ಸಿಗಬಹುದು ಎಂಬುವುದು ಎಂದು ಡಿಕೆ ಶಿವಕುಮಾರ್ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section