ಮಂಗಳೂರು-ಕೋರ್ ಟೆಕ್ನಾಲಜೀಸ್ ನ ಮೂರನೇ ಶಾಖೆ ಶುಭಾರಂಭ

0
133

ಮಂಗಳೂರು : ಕಂಕನಾಡಿಯಲ್ಲಿ ಕೋರ್ ಟೆಕ್ನಾಲಜೀಸ್ ನ ಮೂರನೇ ಶಾಖೆ ಸೆ.9ರಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಸಂಸ್ಥೆಯ ಮಾಲಕರ ತಂದೆ ಜನಾರ್ಧನ ಗೌಡ, ತಾಯಿ ಕುಸುಮ ದಂಪತಿಗಳು ಉದ್ಘಾಟಿಸಿದರು.

ಶ್ರೀ.ಎಂ ಗಣೇಶ್ ಕಾಮತ್, ಅಧ್ಯಕ್ಷರು ಕೆನರಾ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ (ಕೆ.ಸಿ.ಸಿ. ಐ) ಇವರು ದೀಪ ಬೆಳಗಿಸಿ ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು. ಮಂಗಳೂರು ಸಿಟಿ ಕಾರ್ಪೋರೇಷನ್ ನ ಕೌನ್ಸಿಲರ್ ಗಳಾದ ಶ್ರೀಮತಿ ಕಾವ್ಯ ನಟರಾಜ್ ಹಾಗೂ ಶ್ರೀ ಸಂದೀಪ್ ಗರೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು.

ಶ್ರೀ ಯಸ್ವಿಅನೂಪ್ ಇವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಮಿಥುನ್ ವಿದ್ಯಾಪುರ ಪ್ರಾರ್ಥಿಸಿ, ರವಿಚಂದ್ರ, ಇವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ಅನೂಪ್ ಕೆ.ಜೆ ರವರು ನಮ್ಮಲ್ಲಿ ಕೇವಲ 10 ಸಾವಿರದಿಂದ ಡೆಸ್ಕುಟಾಪ್ ಹಾಗೂ 11 ಸಾವಿರದಿಂದ ಲ್ಯಾಪ್ ಟಾಪ್ 1 ವರ್ಷದ ವಾರಂಟಿಯೊಂದಿಗೆ ಲಭ್ಯವಿದೆ ಎಂದು ಗ್ರಾಹಕರ ಸಹಕಾರವನ್ನು ಕೋರಿದರು.ಅನೇಕ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here