ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್

By: Ommnews

Date:

Share post:

ಕಲಬುರಗಿ: ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸುವ ಮೂಲಕ ನಟ ಪ್ರಕಾಶ್ ರಾಜ್‌ ಮತ್ತೆ ವಿವಾದ ಎಳೆದುಕೊಂಡಿದ್ದಾರೆ.

Advertisement
Advertisement
Advertisement

ಕಲಬುರಗಿ ನಗರದ ಪಂಡಿತ್ ರಂಗಮಂದಿರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸನಾತನ ಧರ್ಮ ಅಂದ್ರೆ ಏನು ಅಂತಾ ಪ್ರಶ್ನಿಸಿದಾಗ, ಮನುಷ್ಯ ಬದಲಾಗುವುದಿಲ್ಲ ನಾನು ಎನ್ನುವುದು ಪ್ರಕೃತಿಗೆ ವಿರುದ್ಧ ನಾನೇ ಶ್ರೇಷ್ಠ ಅಂತಾನೆ. ಸದ್ಯ ಕಾಗೆಗಳು ಹೆಚ್ಚಾಗಿ ಸೇರಿಕೊಂಡು ಕೋಗಿಲೆ, ನವಿಲು ಸಹ ನಮ್ಮ ಮಾತು ಕೇಳಬೇಕು ಎನ್ನುವ ಮಾತು ಆಡುತ್ತಿದ್ದಾರೆ. ಈ ಮೂಲಕ ಸನಾತನ ಧರ್ಮದ ಬಗ್ಗೆ ಇವರು ದಾರಿ ತಪ್ಪಿಸಲು ತರುತ್ತಿದ್ದಾರೆ ಅಂತಾ ಹೇಳುವ ಮೂಲಕ ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಕೆ ಮಾಡಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ರಾಜ್‌, ಸನಾತನ ಧರ್ಮದ ಬಗ್ಗೆ ಮಾತನಾಡುವವರು ಯಾರೂ ಹಿಂದೂಗಳಲ್ಲ. ಇವರೆಲ್ಲಾ ರಾಜಕೀಯ ಲಾಭಕ್ಕಾಗಿ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಅಮವಾಸ್ಯೆ ಅಂದ್ರೆ ಚೆನ್ನಾಗಿಲ್ವಂತೆ, ಆದ್ರೆ ಚಂದ್ರಯಾನ ಮಾಡ್ತಾರಂತೆ, ಎಲ್ಲಾ ಧರ್ಮಗಳು ವಿಕಾರ ಇದೆ ಧರ್ಮಯುದ್ದ ಯಾವಾಗ ಮುಗಿಯುತ್ತೆ ಎನ್ನೊದು ಗೊತ್ತಾಗಲ್ಲ. ಧರ್ಮ ಯುದ್ಧ ಕಾಳ್ಗಿಚ್ಚು ಇದ್ದಂತೆ ಮೂಲನೂ ಗೊತ್ತಾಗಲ್ಲಾ ಅಂತ್ಯನೂ ಗೊತ್ತಾಗಲ್ಲ. ಹಿಂದೆ ರಾಜರ ಕಾಲದಲ್ಲಿ ರಾಜರ ಜೊತೆ ಕೆಲಸ ಮಾಡುವವರಿಗೆ ಕೆಲವೊಮ್ಮೆ ಸಂಬಳ ಕೊಡೋಕೆ ಆಗುತ್ತಿರಲಿಲ್ಲ. ಆಗ ಆ ಸೈನಿಕರು ಲೂಟಿ, ಅತ್ಯಾಚಾರ ಹಾಗೂ ದರೋಡೆ ಮಾಡಿಕೊಂಡು ಹೋಗುತ್ತಿದ್ದರು. ಇಂತಹವರನ್ನೇ ರಾಜಕಿಯದಲ್ಲೂ ಬಳಸಿಕೊಳ್ಳುತ್ತಿದ್ದಾರೆ ಎಂದರು.

ರೌಡಿಗಳನ್ನು ರಾಜಕೀಯಕ್ಕೆ ಯಾಕೆ ಸೇರಿಸಿಕೊಳ್ಳುತ್ತೀರಾ? ಅಂತವರನ್ಮೇ ಎಂಪಿ ಮಾಡ್ತೀರಾ?, ರೌಡಿಶೀಟರ್ ಗಳನ್ನು ಸೇರಿಸಿಕೊಳ್ಳುತ್ತಿರಾ ಎಂದು ಪ್ರಶ್ನಿಸಿದರು. ನಾನು ಯಾವುದೇ ಧರ್ಮದ ವಿರುದ್ಧ ಅಲ್ಲ. ನಾವು ಧರ್ಮದ ಬಗ್ಗೆ ಮಾತಾಡುತ್ತಿಲ್ಲ. ರಾಜಕಾರಣಿ ಏನೂ ಧರ್ಮ ಗುತ್ತಿಗೆ ಪಡೆದಿದ್ದಾರಾ? ನಾನು ಜನರನ್ನು ಪ್ರೀತಿಸುವ ಮನುಷ್ಯ, ರೋಗ ಅವರಿಗೆ ನನಗಲ್ಲ. ಸ್ಟಾಲೀನ್ ಮಾತಾಡಿದ್ದು ತಪ್ಪೇನಿದೆ. ಅಸ್ಪೃಶ್ಯತೆ ಹೋಗಬೇಕು ಇಲ್ಲವೋ? ಅವರ ಹೇಳಿಕೆಯನ್ನ ತಿರುಚಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಜಾತಿ ವಿವಾದ ಹುಟ್ಟು ಹಾಕ್ತಿರೋರಿಗೆ ಕೆಲಸ ಇಲ್ವಲ್ಲ. ಅದಕ್ಕೆ ಈ ರೀತಿ ಮಾಡ್ತಿದ್ದಾರೆ. ಇನ್ನು ನನ್ನಂತೆ ಇತರೆ ನಟರು ಯಾಕೆ ಮಾತನಾಡಲ್ಲ ಎಂಬ ಪ್ರಶ್ನೆಗೂ ಸಹ ಪ್ರಕಾಶ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರು ಚೂಡಿ ಹಾಕಿಕೊಂಡು ಇರುವುದು. ನನಗೆ ಗೊತ್ತಿಲ್ಲ. ಹೀಗಾಗಿ ಮಾತನಾಡಲ್ಲ ಅಂತಾ ಹೇಳುವ ಚಡ್ಡಿ ಹಾಕಿಕೊಂಡವರಿಗೆ ದೇಶವ ಕಾಣಿಸೋದಿಲ್ಲ ಮೂಲಕ ವಿವಾದ ಸೃಷ್ಟಿಸಿಕೊಂಡರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section