ಇಸ್ಲಾಮಾಬಾದ್: ಲಷ್ಕರ್ ಇ ತೊಯ್ಬಾದ ಭಯೋತ್ಪಾದಕರಾದ ಮೊಹಮ್ಮದ್ ಮುಝಾಮಿಲ್ ಹಾಗೂ ಆತನ ನಿಕಟವರ್ತಿ ನಯೀಮುರ್ ರಹಮಾನ್ ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬುಧವಾರ ಪಾಕಿಸ್ತಾನದ ಸಿಯಾಲ್ ಕೋಟ್ ನ ಖೋಖ್ರಾನ್ ಚೌಕ್ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಉಗ್ರರನ್ನು ಯಾರು ಗುಂಡು ಹಾರಿಸಿ ಕೊಂದಿದ್ದಾರೆ ಎಂಬುದು ನಿಗೂಢವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ಆಗಂತುಕರು ಪಿಸ್ತೂಲ್ ನಿಂದ ಮುಝಾಮಿಲ್ ಮತ್ತು ನಯೀಮುರ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ದೃಶ್ಯವಿದೆ.
ಘಟನೆಯಲ್ಲಿ ಮೂರನೇ ವ್ಯಕ್ತಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.